ಸಿಬಿಎಸ್‌ಇ: ಜನವರಿ 16ರಿಂದ ಪ್ರಾಕ್ಟಿಕಲ್ ಪರೀಕ್ಷೆ

Update: 2017-12-11 15:49 GMT

ಹೊಸದಿಲ್ಲಿ,ಡಿ.11: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಐ)ಯ 10ನೇ ಹಾಗೂ 12ನೇ ತರಗತಿಯ ಪ್ರಾಕ್ಟಿಕಲ್ ಪರೀಕ್ಷೆಗಳು ಜನವರಿ 16ರಿಂದ ಆರಂಭವಾಗಲಿದೆ. ಈ ಕುರಿತು ಸುತ್ತೋಲೆಯೊಂದನ್ನು ಈಗಾಗಲೇ ದೇಶಾದ್ಯಂತ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ.

  ಪ್ರಾಕ್ಟಿಕಲ್ ಪರೀಕ್ಷೆಗಳ ಅಂಕಗಳನ್ನು ಫೆಬ್ರವರಿ 25ರೊಳಗೆ ಸಿಬಿಎಸ್‌ಇನ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವಂತೆಯೂ ಸೂಚನೆ ನೀಡಲಾಗಿದೆ.

   ಆದರೆ 10 ಹಾಗೂ 12ನೇ ತರಗತಿಯ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಅವು ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಗಳಿವೆ. ಮಾರ್ಚ್‌ನಲ್ಲೇ ಪರೀಕ್ಷೆ ಆರಂಭಗೊಂಡು ಆದೇ ತಿಂಗಳ ಕೊನೆಯೊಳಗೆ ಅದನ್ನು ಪೂರ್ಣಗೊಳಿಸುವ ಬಗ್ಗೆಯೂ ಸಿಬಿಎಸ್‌ಇ ಮಂಡಳಿಯು ಚಿಂತಿಸುತ್ತಿದೆಯೆಂದು ವರದಿಗಳು ತಿಳಿಸಿವೆ.

  ಪ್ರಸ್ತುತ 10 ಹಾಗೂ 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಗಳು ಮಾರ್ಚ್‌ನಲ್ಲಿ ಆರಂಭಗೊಂಡು ಎಪ್ರಿಲ್ ಮೂರನೆ ವಾರದಲ್ಲಿ ಮುಕ್ತಾಯಗೊಳ್ಳುತ್ತವೆ. ಈ ಎರಡೂ ಪರೀಕ್ಷೆಗಳ ವೇಳಾಪಟ್ಟಿಯು ಜನವರಿಯಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

 ಈ ಬಾರಿಯ ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳಿಗೆ ಬರೆಯಲು ಒಟ್ಟು 10.76 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News