ಶಾಲೆಯ ಅಂಗಳಕ್ಕೆ ಬಿದ್ದ ಹೆಲಿಕಾಪ್ಟರ್ ಕಿಟಕಿ

Update: 2017-12-13 17:18 GMT

ಟೋಕಿಯೊ (ಜಪಾನ್), ಡಿ. 13: ಅಮೆರಿಕದ ಸೇನಾ ಹೆಲಿಕಾಪ್ಟರೊಂದರ ಕಿಟಿಕಿಯು ಬುಧವಾರ ದಕ್ಷಿಣ ಜಪಾನ್‌ನ ಶಾಲೆಯೊಂದರ ಮೈದಾನದಲ್ಲಿ ಬಿದ್ದಿದೆ. ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಅಮೆರಿಕದ ನೌಕಾಪಡೆಯು, ಕ್ಷಮೆ ಯಾಚಿಸಿದೆ.

ಫುಟೇನ್ಮ ಮರೀನ್ ವಾಯುನೆಲೆಯ ಸಮೀಪವಿರುವ ಪ್ರಾಥಮಿಕ ಶಾಲೆಯೊಂದರ ಸಮೀಪ ಬೆಳಗ್ಗಿನ 10:09ಕ್ಕೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ.

ಎರಡು ತಿಂಗಳ ಹಿಂದೆ ಒಕಿನಾವ ದ್ವೀಪದ ಖಾಲಿ ಗದ್ದೆಯೊಂದರಲ್ಲಿ ಭೂಸ್ಪರ್ಶ ನಡೆಸಿದ ಬಳಿಕ ಅಮೆರಿಕದ ಸೇನಾ ಹೆಲಿಕಾಪ್ಟರೊಂದು ಬೆಂಕಿಗಾಹುತಿಯಾಗಿತ್ತು.

ಇಂತಹ ಅಪಘಾತಗಳ ಹಿನ್ನೆಲೆಯಲ್ಲಿ, ಆಯಕಟ್ಟಿನ ಒಕಿನಾವ ದ್ವೀಪದಲ್ಲಿ ಅಮೆರಿಕದ ಸೇನಾ ನೆಲೆಗಳಿಗೆ ವಿರೋಧ ಹೆಚ್ಚುತ್ತಿದೆ.

‘‘ಇಂತಹ ಘಟನೆಗಳು ಶಾಲೆಯಲ್ಲಿದ್ದ ಜನರಲ್ಲಿ ಮಾತ್ರವಲ್ಲ, ಒಕಿನಾವದಲ್ಲಿರುವ ಎಲ್ಲ ಜನರಲ್ಲಿ ಕಳವಳ ಹುಟ್ಟುಹಾಕುತ್ತದೆ. ಹಾಗಾಗಿ, ಇಂಥ ಘಟನೆಗಳು ಇನ್ನೆಂದೂ ನಡೆಯಬಾರದು’’ ಎಂದು ಜಪಾನ್ ಸರಕಾರದ ವಕ್ತಾರ ಯೊಶಿಹಿಡೆ ಸುಗ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News