ಪ್ರಾಧಿಕಾರ, ಅಕಾಡೆಮಿಗಳ ಸದಸ್ಯರ ಬದಲಾವಣೆ

Update: 2017-12-14 14:29 GMT

ಬೆಂಗಳೂರು, ಡಿ.14: ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಗಳಲ್ಲಿ ಕೆಲವೊಂದು ಸದಸ್ಯರುಗಳ ಹೆಸರುಗಳನ್ನು ಬದಲಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರಿಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಡಾ. ಸಿದ್ದಣ್ಣ ಉಕ್ಕನಾಳ(ವಿಜಯಪುರ) ಇವರ ಬದಲಾಗಿ ದೊಡ್ಡೇಗೌಡ(ಬೆಂಗಳೂರು) ಹಾಗೂ ಪ್ರಕಾಶ್ ಕಂಬತ್ತಳ್ಳಿ(ಬೆಂಗಳೂರು) ಇವರ ಬದಲಾಗಿ ಬಿ.ಪಿ.ವೀರೇಂದ್ರ ಕುಮಾರ್‌ರನ್ನು ನೇಮಕ ಮಾಡಲಾಗಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದಲ್ಲಿ ಆರೀಫ್ ರಾಜಾ(ರಾಯಚೂರು) ಇವರ ಬದಲಾಗಿ ಪೀರ್‌ಭಾಷ(ಕೊಪ್ಪಳ) ಹಾಗೂ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ (ವಿಜಯಪುರ) ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಡಾ.ರಾಮಕೃಷ್ಣ ಮರಾಠೆ(ವಿಜಯಪುರ)ರನ್ನು ನೇಮಿಸಲಾಗಿದೆ.

  ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸ.ರಘುನಾಥ್(ಕೋಲಾರ) ಇವರ ಬದಲಿಗೆ ಡಾ.ಎಚ್.ದಂಡಪ್ಪ(ಕೋಲಾರ) ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಜಿ. ಲಕ್ಷ್ಮೀಪತಿ(ಬೆಂಗಳೂರು) ಬದಲಿಗೆ ಕೆ.ಶ್ರೀಧರಮೂರ್ತಿ(ಬೆಂಗಳೂರು) ಅವರನ್ನು ನೇಮಕ ಮಾಡಲಾಗಿದೆ.

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಓಂ ಗಣೇಶ್ ಉಪ್ಪುಂದ(ಉಡುಪಿ) ಬದಲಿಗೆ ಮಾಧವ ಶೇಠ್ (ಉಡುಪಿ), ಪೂರ್ಣಿಮಾ ಸುರೇಶ್(ಉಡುಪಿ) ಬದಲಿಗೆ ಶೀಲಾ ಭಂಡಾರಕರ್(ಮೈಸೂರು), ಪಾವ್ಲ ಮೋರಾಸ್(ದಕ್ಷಿಣ ಕನ್ನಡ) ಬದಲಿಗೆ ಪಿ.ಸಂತೋಷ್ ಶೈಣೈ(ಮಂಗಳೂರು) ಹಾಗೂ ಮೋಹನ್ ವರ್ಣಿಕರ್ (ಬೆಂಗಳೂರು) ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅಶೋಕ ದಾಮು(ಉತ್ತರ ಕನ್ನಡ) ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News