ರಾಜ್ ಕೋಟ್-ಸೂರತ್ ನಲ್ಲಿ ಇವಿಎಂ ತಿರುಚಲಾಗಿದೆ: ಹಾರ್ದಿಕ್ ಪಟೇಲ್ ಆರೋಪ

Update: 2017-12-18 10:13 GMT

ಅಹ್ಮದಾಬಾದ್, ಡಿ.18: ರಾಜ್ ಕೋಟ್-ಸೂರತ್ ನಲ್ಲಿ ಇವಿಎಂ ತಿರುಚಲಾಗಿದೆ. ಗುಜರಾತ್ ಚುನಾವಣಾ ಫಲಿತಾಂಶ ಫಿಕ್ಸ್ ಆದ ಮ್ಯಾಚ್ ನಂತೆ ಎಂದು ಪಾಟಿದಾರ್ ನಾಯಕ  ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

ಬಿಜೆಪಿಯ ಗೆಲುವಿನ ಅಂತರ ಕಡಿಮೆಯಿದೆ. ಇವಿಎಂ ಬಗ್ಗೆ ನಮಗೆ ನಂಬಿಕೆಯಿಲ್ಲ. ಆದ್ದರಿಂದ ಮರು ಮತದಾನ ನಡೆಯಬೇಕಾಗಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಅಂಕ್ಲಾವ್ ನಲ್ಲಿ ಕಾಂಗ್ರೆಸ್ ನ ಅಮಿತ್ ಚಾವ್ಡಾ 33,629 ಮತಗಳ ಅಂತರದಲ್ಲಿ ಜಯ ಗಳಿಸಿದ್ದರೆ, ರಾಜ್ ಕೋಟ್ ಪಶ್ಚಿಮದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗೆದ್ದಿದ್ದಾರೆ.

ರಾಧಾನ್ಪುರದಲ್ಲಿ ಬಿಜೆಪಿಯ ಲಾಂವಿಂಗ್ ಜಿ ಠಾಕೂರ್ ರನ್ನು ಮಣಿಸಿದ ಅಲ್ಪೇಶ್ ಠಾಕೂರ್ 18,000 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News