ಇಂದು ಮಧ್ಯಾಹ್ನ 3 ಗಂಟೆಗೆ ಮೇವು ಹಗರಣದ ತೀರ್ಪು ಪ್ರಕಟ

Update: 2017-12-23 05:59 GMT

ರಾಂಚಿ, ಡಿ.23: ಬಹುಕೋಟಿ ರೂ. ಗಳ  ಮೇವು ಹಗರಣಕ್ಕೆ ಸಂಬಂಧಿಸಿ ಶನಿವಾರ ಅಪರಾಹ್ನ 3 ಗಂಟೆಗೆ ರಾಂಚಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯ ಮಂತ್ರಿ ಲಾಲು ಪ್ರಸಾದ್ ಯಾದವ್ ಎದುರಿಸುತ್ತಿರುವ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಪ್ರಕಟಿಸಲಿರುವರು.

ಲಾಲು ಪ್ರಸಾದ್ ಯಾದವ್ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಮೇವು ಖರೀದಿಗೆ ಮೀಸಲಿರಿಸಿದ್ದ ಹಣದಲ್ಲಿ  1994 ಮತ್ತು 1996ರ ಅವಧಿಯಲ್ಲಿ 89.27  ಕೋಟಿ ರೂ.ಗಳನ್ನು ದೇವಗಢ ಖಜಾನೆಯಿಂದ ಅಕ್ರಮವಾಗಿ ಪಡೆದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಗಳಾದ ಲಾಲು ಪ್ರಸಾದ್ ಯಾದವ್ ಮತ್ತು   ಜಗನ್ನಾಥ ಮಿಶ್ರಾ ಸೇರಿದಂತೆ 34 ಮಂದಿ ಆರೋಪ ಎದುರಿಸುತ್ತಿದ್ದಾರೆ.
ಮೇವು ಹಗರಣದ ಒಂದು ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರು ದೋಷಿ ಎಂದು 2013ರ ಡಿಸೆಂಬರ್ ನಲ್ಲಿ  ತೀರ್ಪು ಹೊರಬಿದ್ದಿತ್ತು. ಲಾಲು ಅವರಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಿತ್ತು.   ಆದರೆ ಸುಪ್ರೀಂಕೋರ್ಟ್ ನೀಡಿದ್ದ ಜಾಮೀನಿನ ಮೇರೆಗೆ ಲಾಲು ಪ್ರಸಾದ್ ಯಾದವ್ ಹೊರಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News