ಹಸುಳೆಯನ್ನು 1.80 ಲಕ್ಷ ರೂ.ಗೆ ಮಾರಿದ ತಂದೆ ತಾಯಿ

Update: 2017-12-24 10:21 GMT

ಅರಿಯಾಳೂರ್,ಡಿ. 24: ತಮಿಳ್ನಾಡಿನ ಅರಿಯಾಳೂರಿನಲ್ಲಿ ನವಜಾತ ಶಿಶುವನ್ನು ಮಾರಿದ ನಾಡವೈದ್ಯನ ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆ. 1.80 ಲಕ್ಷ ರೂಪಾಯಿಗೆ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಲಾಗಿದ್ದು, ಮಿನಸರುತಿ ಎಂಬಲ್ಲಿನ ದಂಪತಿ ಕಟುಬಡತನದ ಕಾರಣದಿಂದ ಸ್ವಂತ ಹೆಣ್ಣು ಮಗುವನ್ನು ಮಾರಲು ತೀರ್ಮಾನಿಸಿ ಇದನ್ನು ಸಂಬಂಧಿಕನೊಬ್ಬನಿಗೆ ತಿಳಿಸಿದ್ದರು.

ದಂಪತಿಗೆ ಬೇರೆ ಇಬ್ಬರು ಮಕ್ಕಳಿದ್ದಾರೆ. ಸಂಬಂಧಿಕನಾದ ನಾಡವೈದ್ಯನ ಸಹಾಯದಲ್ಲಿ ಕೋಯಮತ್ತೂರಿನಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಲಾಗಿದೆ. ಮಗುವಿಗೆ ವ್ಯಾಕ್ಸಿನ್ ನೀಡಲು ಕರೆತರದಾಗ ಸಂದೇಹಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ ಇದನ್ನು ಮೇಲಧಿಕಾರಿ ತಿಳಿಸಿದ್ದಾರೆ. ನಂತರ ಮಗುವಿನ ಕುರಿತು ವಿಚಾರಿಸಿದಾಗ ಶಿಶುಕಲ್ಯಾಣ ಸಮಿತಿ ಮತ್ತು ಜಿಲಾಧಿಕಾರಿಗಳ ಮುಂದೆ ತಂದೆ ತಾಯಿ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ನಡೆಸಿದಾಗ ಮಗು ಮಾರಾಟದ ವಿವರ ಬಹಿರಂಗವಾಗಿದೆ.

ಇದರೊಂದಿಗೆ ತಂದೆತಾಯಿ ಸಹಿತ ಆರು ಮಂದಿಯನ್ನುಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಗುವನ್ನು ಮಾರಲು ಸಹಾಯ ಮಾಡಿದ ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News