×
Ad

ಮಧ್ಯಂತರ ಜಾಮೀನು ದೊರೆತಲ್ಲಿ ಯಾವುದೇ ಅಧಿಕೃತ ಫೈಲ್‌ಗಳಿಗೆ ಸಹಿ ಹಾಕುವಂತಿಲ್ಲ: ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌

Update: 2024-05-07 15:32 IST

ಅರವಿಂದ್‌ ಕೇಜ್ರಿವಾಲ್‌,  ಸುಪ್ರೀಂ ಕೋರ್ಟ್‌ | PC : PTI 

ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಲ್ಲಿ ಯಾವುದೇ ಅಧಿಕೃತ ಫೈಲ್‌ಗಳಿಗೆ ಸಹಿ ಹಾಕುವುದಿಲ್ಲ ಎಂಬ ಲಿಖಿತ ಭರವಸೆ ನೀಡಲು ಸಿದ್ಧರಿದ್ದೀರಾ ಎಂದು ಈಡಿಯಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಸುಪ್ರೀಂ ಕೋರ್ಟ್‌ ಕೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ,” ಮುಖ್ಯಮಂತ್ರಿ ಸಹಿ ಹಾಕಿಲ್ಲ ಎಂಬ ಕಾರಣ ನೀಡಿ ಎಲ್‌ಜಿ ಅವರು ಯಾವುದೇ ಕೆಲಸ ನಿಲ್ಲಿಸುವುದಿಲ್ಲ ಎಂಬ ಷರತ್ತಿನ ಮೇರೆಗೆ ಅವರು ಫೈಲ್‌ಗಳಿಗೆ ಸಹಿ ಹಾಕುವುದಿಲ್ಲ,” ಎಂದು ಹೇಳಿದರು.

ಮಧ್ಯಂತರ ಜಾಮೀನು ದೊರೆತಲ್ಲಿ ಆ ಸಂದರ್ಭ ಸಿಎಂ ಕರ್ತವ್ಯ ನಿರ್ವಹಿಸುವುದು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೇಜ್ರಿವಾಲ್‌ ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರ ಪೀಠ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News