ನ್ಯೂಝಿಲ್ಯಾಂಡ್ ನಲ್ಲಿ ರಸ್ತೆ ಅಪಘಾತ: ಭಾರತೀಯ ಯುವಕ ಮೃತ್ಯು

Update: 2017-12-25 06:49 GMT

ಹೈದರಾಬಾದ್, ಡಿ.25: ನ್ಯೂಝಿಲ್ಯಾಂಡ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಹೈದರಾಬಾದ್ ನ ಯುವಕನೊಬ್ಬ ಮೃತಪಟ್ಟಿದ್ದಾನೆ. ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡಬೇಕು ಎಂದು ಯುವಕನ ಕುಟುಂಬಸ್ಥರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಿಗೆ ಮನವಿ ಸಲ್ಲಿಸಿದ್ದಾರೆ.

ನ್ಯೂಝಿಲ್ಯಾಂಡ್ ನ ಆಕ್ ಲ್ಯಾಂಡ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸೈಯದ್ ಅಬ್ದುರ್ರಹೀಂ ಫಹದ್ ಟ್ಯಾಕ್ಸಿ ಡ್ರೈವರ್ ಆಗಿಯೂ ಕೆಲಸ ಮಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪಾನಮತ್ತನಾದ ಚಾಲಕನೋರ್ವ ಕಾರನ್ನು ಚಲಾಯಿಸಿಕೊಂಡು ಬಂದು ಟ್ರಾಫಿಕ್ ಸಿಗ್ನಲನ್ನು ದಾಟಿ ಫಹದ್ ರ ಕಾರಿಗೆ ಢಿಕ್ಕಿ ಹೊಡೆದಿದ್ದ. ಪರಿಣಾಮ ಫಹದ್ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿ ಫೈಝಲ್ ಎಂಬವರು ಮಾಹಿತಿ ನೀಡಿದ್ದಾರೆ.

ಫಹದ್ ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ಹೈದಾರಾಬಾದ್ ನ ಚಂಚಲ್ ಗುಡಾದಲ್ಲಿರುವ ಕುಟುಂಬಸ್ಥರು ಸುಷ್ಮಾ ಸ್ವರಾಜ್ ರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News