ನೀರು ಕೊಡ್ತೀವಿ ಅಂತ ಗೋವಾ ಸಿಎಂ ಮಹಾದಾಯಿ ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಲಿ: ಸಿದ್ದರಾಮಯ್ಯ

Update: 2017-12-27 15:02 GMT

ಬೆಂಗಳೂರು, ಡಿ. 27: ಅಧಿಕಾರ ಹೋಗುತ್ತೆ, ಬರುತ್ತೆ ಅಧಿಕಾರ ನೀಡೋರು ನೀವು. ಅಧಿಕಾರದಿಂದ ಇಳಿಸೋರು ನೀವು. ಅಧಿಕಾರ ಯಾರ ಜೇಬಿನಲ್ಲೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ, ಮಹಾದಾಯಿಗಾಗಿ ಇಡೀ ಉತ್ತರ ಕರ್ನಾಟಕ ಬಂದ್ ಆಗಿದೆ. ಬಿಜೆಪಿಯವರು ಎಲ್ಲರೂ ಸೇರಿ ನಾಟಕ ಆಡ್ತಿದಾರೆ. ಕನಿಷ್ಟ ಸೌಜನ್ಯದಿಂದಾದಲೂ ಕರ್ನಾಟಕದ ಸಿಎಂ ಆದ ನನಗೆ ಪತ್ರ ಬರೆಯಬೇಕಿತ್ತು. ಪ್ರತಿಷ್ಠೆ ಬಿಟ್ಟು ನಾನು ಮಾತುಕತೆಗೆ ಸಿದ್ಧ  ಎಂದು ಪರಿಕ್ಕರ್ ಗೆ ಪತ್ರ ಬರೆದಿದ್ದೇನೆ. ಆದರೆ ಇನ್ನೂ ಉತ್ತರ ನೀಡಿಲ್ಲ. ಚುನಾವಣೆ ಆದ ಮೇಲೆ ಯಡಿಯೂರಪ್ಪ ಸಿಎಂ ಆಗುತ್ತಾರೆ ಆಗ ಮಾತನಾಡುತ್ತೇವೆ ಎಂದು ಪರಿಕ್ಕರ್ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರ ಅಪ್ಪನಾಣೆ ಸಿಎಂ ಆಗಲ್ಲ. ಲೂಟಿ ಹೊಡೆದವರಿಗೆ, ಜೈಲಿಗೆ ಹೋದವರಿಗೆ ರಾಜ್ಯದ ಜನ ಅಧಿಕಾರ ಕೊಡಲ್ಲ. ಜನ ಅನ್ನ, ವಸತಿ ಕೊಟ್ಟವರನ್ನ ನೆನಪಿಟ್ಟುಕೊಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದಲಿತರ ಮನೆಗೆ ಹೋಗೋದು, ಹೋಟೆಲ್ ತಿಂಡಿ ತಿನ್ನೋದು. ಬಿಜೆಪಿ ನಡಿಗೆ ದಲಿತ ಮನೆ ಕಡೆಗೆ ಅನ್ನೋದು. ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಒಮ್ಮೆಯೂ ದಲಿತರ ಮನೆಗೆ ಹೋಗಲಿಲ್ಲ. ಸುಮ್ಮನೆ ದೊಂಬರಾಟ, ನಾಟಕ ಎಲ್ಲಾ ನಡೆಯಲ್ಲ ಎಂದು ತಿಳಿಸಿದರು.

ಮಹಾದಾಯಿ ನೀರನ್ನು ಡಿ.15 ರೊಳಗೆ ಹರಿಸುತ್ತೇನೆ ಎಂದು ಕೆಲವರು ಜನರ ದಾರಿ ತಪ್ಪಿಸಿದರು.  ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೊಂದು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯುವುದು ಶಿಷ್ಟಾಚಾರ.  ನನಗೆ ಪತ್ರ ಬರೆಯದಿದ್ದರೂ ಕೂಡ ಸಭೆ ಕರೆಯಲು ಕೋರಿ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ನಾನು ಅಸ್ಪೃಶ್ಯ, ನನ್ನ ಜೊತೆ ಮಾತನಾಡಲು ಇಷ್ಟ ವಿಲ್ಲದಿದ್ದರೆ ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News