ರಾಜಕೀಯ ಪ್ರವೇಶ ಖಚಿತಪಡಿಸಿದ ಸೂಪರ್‌ಸ್ಟಾರ್ ರಜನೀಕಾಂತ್

Update: 2017-12-31 05:48 GMT

ಚೆನ್ನೈ, ಡಿ.31: ಸೂಪರ್ ಸ್ಟಾರ್ ಖ್ಯಾತಿಯ ರಜನೀಕಾಂತ್ ರಾಜಕೀಯ ಪ್ರವೇಶಿಸುವ ಬಗ್ಗೆ ರವಿವಾರ ತನ್ನ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.

‘‘ನಾನು ಹೊಸ ಪಕ್ಷ ಸ್ಥಾಪಿಸಲಿದ್ದು, ನನ್ನ ಪಕ್ಷ ತಮಿಳುನಾಡಿನ ಎಲ್ಲ 234  ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ’’ ಎಂದು ರಜನೀಕಾಂತ್ ಘೋಷಿಸಿದ್ದಾರೆ.

ರಜನೀಕಾಂತ್ ರಾಜಕೀಯ ಪ್ರವೇಶ ಘೋಷಣೆಯ ಮುಖ್ಯಾಂಶಗಳು ಇಂತಿವೆ...

*ನಾನು ರಾಜಕೀಯ ಪ್ರವೇಶಿಸುವುದು ಖಚಿತ.

*ನಾನು ಹೊಸ ಪಕ್ಷವನ್ನು ಕಟ್ಟುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ.

*ಈಗ ಪ್ರಜಾಪ್ರಭುತ್ವ ಕೆಟ್ಟ ಸ್ವರೂಪದಲ್ಲಿದೆ. ಇತರ ಎಲ್ಲ ರಾಜ್ಯಗಳು ನಮ್ಮನ್ನು(ತಮಿಳುನಾಡು) ನೋಡಿ ತಮಾಷೆ ಮಾಡುತ್ತಿದ್ದಾರೆ. ಈಗ ನಾನು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ತಪ್ಪೊಪ್ಪಿಕೊಂಡಂತಾಗುತ್ತದೆ.

*ಪ್ರಜಾಪ್ರಭುತ್ವದ ಹೆಸರಲ್ಲಿ ರಾಜಕಾರಣಿಗಳು ನಮ್ಮದೇ ನೆಲದಲ್ಲಿ ನಮ್ಮ ಹಣ ಲೂಟಿ ಮಾಡುತ್ತಿದ್ದಾರೆ. ನಾವು ಬೇರುಮಟ್ಟದಲ್ಲಿ ಇದನ್ನು ಸರಿಪಡಿಸಬೇಕಾದ ಅಗತ್ಯವಿದೆ.

 *ರಾಜರ ಕಾಲದಲ್ಲಿ ಆಳುವವರು ಬೇರೆ ದೇಶಗಳು ಹಾಗೂ ಸಾಮ್ರಾಜ್ಯವನ್ನು ಲೂಟಿ ಮಾಡುತ್ತಿದ್ದರು. ಆಳುವವರು ನಮ್ಮದೇ ದೇಶವನ್ನು ಲೂಟಿ ಮಾಡುವಂತಹ ಮಟ್ಟಕ್ಕೆ ನಾವು ತಲುಪಿದ್ದೇವೆ.

*ಸತ್ಯ, ಕಾಯಕ ಹಾಗೂ ಅಭಿವೃದ್ಧಿ ನಮ್ಮ ಪಕ್ಷದ ಮೂರು ಮಂತ್ರಗಳು.

*ಮುಂದಿನ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಬೇಕೇ, ಬೇಡವೇ ಎಂದು ನಿರ್ಧರಿಸುತ್ತೇನೆ.

*ನಾನು ಹುದ್ದೆ ಅಥವಾ ಸ್ಥಾನದ ಆಸೆಗಾಗಿ ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ. ನನಗೆ ಅಂತಹ ಬಯಕೆಯಿದ್ದರೆ 1996ರಲ್ಲೇ ಈಡೇರಿಸಿಕೊಳ್ಳಬಹುದಿತ್ತು.

* ವ್ಯವಸ್ಥೆ ಬದಲಾಗಬೇಕಾಗಿದೆ. ಪ್ರಜಾಪ್ರಭುತ್ವ ಭ್ರಷ್ಟವಾಗಿದೆ. ಅದನ್ನು ಸ್ಚಚ್ಚಗೊಳಿಸಬೇಕಾದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News