ಆಸ್ಟ್ರೇಲಿಯ: ಹೊಸವರ್ಷಾಚರಣೆಯ ವೇಳೆ ಸಿಡಿಮದ್ದು ಸ್ಫೋಟ: ಹಲವರಿಗೆ ಗಾಯ

Update: 2018-01-01 17:46 GMT

ಕ್ಯಾನ್‌ಬೆರ್ರಾ, ಜ.1: ಹೊಸವರ್ಷಾಚರಣೆಯ ಸಡಗರಕ್ಕಾಗಿ ಆಸ್ಟ್ರೇಲಿಯದ ಬೀಚೊಂದರ ಸಮೀಪ, ಸಿಡಿಮದ್ದು ಪ್ರದರ್ಶನ ನೀಡುತ್ತಿದ್ದ ಬಾರ್ಜ್ ನೌಕೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಭಯಭೀತರಾದ ಸಹಸ್ರಾರು ಮಂದಿ ದಿಕ್ಕುಪಾಲಾಗಿ ಓಡಿದ ಘಟನೆ ಆಸ್ಟ್ರೇಲಿಯದ ನ್ಯೂಸೌತ್‌ವೇಲ್ಸ್‌ನ ಟೆರ್ರಗಲ್ ಬೀಚ್‌ನಲ್ಲಿ ರವಿವಾರ ರಾತ್ರಿ ನಡೆದಿದೆ.

ಬಾರ್ಜ್ ನೌಕೆಯಲ್ಲಿ ಸಿಡಿಮದ್ದು ಪ್ರದರ್ಶನದ ವೇಳೆ, ತಾಂತ್ರಿಕ ಲೋಪದಿಂದಾಗಿ ಸಿಡಿಮದ್ದುಗಳಿಗೆ ಏಕಕಾಲದಲ್ಲಿ ಬೆಂಕಿಹತ್ತಿಕೊಂಡಿತು. ಹಲವಾರು ಸಿಡಿಮದ್ದುಗಳು ಸ್ಫೋಟಿಸಿ, ಬೀಚ್‌ನಲ್ಲಿ ಜಮಾಯಿಸಿದ್ದ ಸಹಸ್ರಾರು ಮಂದಿಯ ಮೇಲೆ ಬಂದು ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಯಭೀತರಾದ ಸಹಸ್ರಾರು ಜನರು ಕೂಡಲೇ ಸುರಕ್ಷತೆಗಾಗಿ ದಿಕ್ಕುಪಾಲಾಗಿ ಓಡಿದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News