ಭೀಮಾ ಕೋರೆಗಾಂವ್ ಹಿಂಸಾಚಾರ: ಮಹಾರಾಷ್ಟ್ರ ಬಂದ್

Update: 2018-01-03 05:30 GMT

ಮುಂಬೈ, ಜ.3: ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬುಧವಾರ ಮಹಾರಾಷ್ಟ್ರ ರಾಜ್ಯವ್ಯಾಪಿ ಬಂದ್ ಕರೆ ನೀಡಿದ್ದು, ಬಂದ್ ಹಿನ್ನೆಲೆಯಲ್ಲಿ ಮುಂಬೈ ಸಹಿತ ರಾಜ್ಯದೆಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ.

1. ‘‘ಮುಂಬೈನಲ್ಲಿ ಶಾಲಾ ಬಸ್‌ಗಳು ಓಡಾಡುತ್ತಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ರಿಸ್ಕ್ ತೆಗೆದುಕೊಳ್ಳಲಾರೆವು. ಬೆಳಗ್ಗೆ 11 ಗಂಟೆಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’’ ಎಂದು ಶಾಲಾ ಬಸ್ ಮಾಲಕರ ಸಂಸ್ಥೆಯ ಅನಿಲ್ ಗರ್ಗ್ ಹೇಳಿದ್ದಾರೆ.

2. ಜನವರಿ 4 ಮಧ್ಯರಾತ್ರಿ ತನಕ ಥಾಣೆ ಜಿಲ್ಲೆಯಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.

3. ಮುಂಬೈ ಡಬ್ಬಾವಾಲಾಗಳ ಅಸೋಸಿಯೇಶನ್ ಬುಧವಾರ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಡಬ್ಬಾಗಳನ್ನು ಸಾಗಿಸಲು ಸಾರಿಗೆ ವ್ಯವಸ್ಥೆ ಸರಿಯಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.

4. ಥಾಣೆಯಲ್ಲಿ ಕೆಲವು ಪ್ರತಿಭಟನಾಕಾರರು ರೈಲ್ವೇ ಸೇವೆಗೆ ಧಕ್ಕೆ ಮಾಡಲು ಯತ್ನಿಸಿದ್ದು, ತಕ್ಷಣವೇ ಆರ್‌ಪಿಎಫ್ ಹಾಗೂ ಜಿಆರ್‌ಪಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

 5.ಮುಂಬೈ ಪೊಲೀಸರು ಸೂಕ್ಷ್ಮ ಪ್ರದೇಶಗಳಾದ ಘಾಟ್ಕೋಪರ್ ರಮಾಬಾಯಿ ಕಾಲೋನಿ ಹಾಗೂ ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

6. ಪ್ರತಿಭಟನಾಕಾರರ ರ್ಯಾಲಿಯಿಂದ ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.

7 ಪುಣೆಯ ಬಾರಾಮತಿ ಹಾಗೂ ಸತಾರಕ್ಕೆ ತೆರಳುವ ಬಸ್ ಸೇವೆಗಳನ್ನು ಮುಂದಿನ ಆದೇಶದ ತನಕ ಸ್ಥಗಿತಗೊಳಿಸಲಾಗಿದೆ.

8. ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಶಾಲೆಗಳ ಬಾಗಿಲು ತೆರೆದಿಲ್ಲ. ಶಾಲಾ ಬಸ್‌ಗಳು ಓಡಾಡುತ್ತಿಲ್ಲ. ಇಂದು ಕೆಲವು ಕಾಲೇಜುಗಳು ಬಾಗಿಲು ತೆರೆದಿವೆ. ಆದರೆ ಹಾಜರಾತಿ ಕೇವಲ ಶೇ.40ರಷ್ಟಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

9: ಕಲ್ಲುತೂರಾಟದ ಭಯದಿಂದ ಥಾಣೆ ಮುನ್ಸಿಪಲ್ ಸಾರಿಗೆಯ ಬೊರಿವಲಿ ಹಾಗೂ ಅಂಧೇರಿ ನಡುವೆ ಚಲಿಸುವ ಎಸಿ ವೋಲ್ವೊ ಬಸ್ ಸೇವೆಯನ್ನು ರದ್ದುಪಡಿಸಲಾಗಿದೆ.

 10. ಔರಂಗಾಬಾದ್ ಜಿಲ್ಲೆಯ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

11. ಕೊಲ್ಲಾಪುರದಲ್ಲಿ ಮುನ್ಸಿಪಲ್ ಸಾರಿಗೆಯ ಎಲ್ಲ ಬಸ್ ಸೇವೆಗಳನ್ನು ನಿಲ್ಲಿಸಲಾಗಿದೆ.

 12. ಬಂದ್‌ನಿಂದಾಗಿ ಪುಣೆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮಬೀರಿದೆ. ಜನಜಂಗುಳಿಯಿರುವ ಸ್ವರ್ಗೆಟ್ ಹಾಗೂ ಶಿವಾಜಿನಗರದ ಬಸ್ ಡಿಪೋ ಬಿಕೋ ಎನ್ನುತ್ತಿದೆ. ಬಾರಾಮತಿ ಹಾಗೂ ಸತಾರದಿಂದ ಯಾವುದೇ ಬಸ್ ಆಗಮಿಸುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News