ಅಮೆರಿಕದಲ್ಲಿ ಏಳೂವರೆ ಲಕ್ಷ ಭಾರತೀಯರ ಸಂಕಟ ದೂರ: ವೀಸಾ ನಿರ್ಬಂಧ ಪ್ರಸ್ತಾವ ಕೈಬಿಟ್ಟ ಅಮೆರಿಕ

Update: 2018-01-09 07:26 GMT

ವಾಶಿಂಗ್ಟನ್, ಜ.9: ಎಚ್-1ಬಿ ವೀಸಾ ಹೊಂದಿರುವವರನ್ನು ಗಡೀಪಾರು ಮಾಡುವ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಅಮೆರಿಕಾ ಹೇಳಿದ್ದು, ಏಳೂವರೆ ಲಕ್ಷ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.

“ಎಚ್-1ಬಿ ವೀಸಾ ಹೊಂದಿರುವವರನ್ನು ಅಮೆರಿಕಾದಿಂದ ಹೊರದಬ್ಬುವ ಯಾವುದೇ ಬದಲಾವಣೆಗಳನ್ನು ನಾವು ಪರಿಗಣಿಸುವುದಿಲ್ಲ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ಅಧ್ಯಕ್ಷರ ‘ಬೈ ಅಮೆರಿಕನ್, ಹಯರ್ ಅಮೆರಿಕನ್’ ಘೋಷಣೆಯನ್ನು ಪಾಲಿಸಲು ಏಜೆನ್ಸಿಯು ಹಲವಾರು ನೀತಿ ಮತ್ತು ನಿಯಂತ್ರಕ ಬದಲಾವಣೆಗಳನ್ನು ಪರಿಗಣಿಸುತ್ತದೆ” ಎಂದವರು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ಅಮೆರಿಕನ್ನರ ಉತ್ಪನ್ನಗಳನ್ನು ಖರೀದಿಸಿ, ಅಮೆರಿಕನ್ನರನ್ನು ಕೆಲಸಕ್ಕೆ ನೇಮಿಸಿ’ (ಬಯ್ ಅಮೆರಿಕನ್, ಹಯರ್ ಅಮೆರಿಕನ್) ನೀತಿಗೆ ಅನುಗುಣವಾಗಿ ರೂಪುಗೊಂಡಿರುವ ಈ ಪ್ರಸ್ತಾಪವನ್ನು ಜಾರಿಗೊಳಿಸಲು ಅಮೆರಿಕ ಮುಂದಾಗಿದ್ದರೆ 5 ಲಕ್ಷದಿಂದ 7.5 ಲಕ್ಷದಷ್ಟಿರುವ ಎಚ್-1ಬಿ ಭಾರತೀಯ ವೀಸಾದಾರರು ಮನೆಗೆ ಮರಳುವ ಸಾಧ್ಯತೆಯಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News