28 ವಾರಗಳ ಗರ್ಭವನ್ನು ತೆಗೆಯಲು ಅನುಮತಿ ನೀಡಿದ ನ್ಯಾಯಾಲಯ

Update: 2018-01-09 16:35 GMT

ಮುಂಬೈ, ಜ.9: ಭ್ರೂಣದಲ್ಲಿ ಗಂಭೀರ ಪ್ರಮಾಣದಲ್ಲಿ ಅಸಹಜತೆಯಿರುವುದರಿಂದ ಭವಿಷ್ಯದಲ್ಲಿ ತಾಯಿಯು ಅನುಭವಿಸಬಹುದಾದ ಮಾನಸಿಕ ವೇದನೆಯನ್ನು ಹಾಗೂ ಇತರ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡ ಮುಂಬೈ ನ್ಯಾಯಾಲಯವು ಮಂಗಳವಾರದಂದು ಮಹಿಳೆಯೊಬ್ಬರು ತನ್ನ 28 ವಾರಗಳ ಗರ್ಭವನ್ನು ತೆಗೆಯಲು ಅನುಮತಿ ನೀಡಿದೆ.

ಗರ್ಭಧಾರಣೆಯ ವೈದ್ಯಕೀಯ ಕೊನೆಗೊಳಿಸುವಿಕೆ (ಎಂಪಿಟಿ) ಕಾಯ್ದೆಯು ಭ್ರೂಣದಲ್ಲಿ ಅಸಹಜತೆಯಿದ್ದರೂ 20 ವಾರಗಳ ನಂತರ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಮಗುವಿಗೆ ಇರಬಹುದಾದ ಆರೋಗ್ಯದ ತೊಂದರೆಗಳು ಮತ್ತು ಅದರಿಂದ ತಾಯಿಯು ಅನುಭವಿಸಬೇಕಾದ ನೋವನ್ನು ಪರಿಗಣಿಸಿ ಮಾನವೀಯ ನೆಲೆಯಲ್ಲಿ ನ್ಯಾಯಾಲಯವು ಈ ತೀರ್ಪು ನೀಡಿದೆ ಎಂದು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

ಎಂಪಿಟಿ ಕಾಯ್ದೆಯು 20 ವಾರಗಳ ನಂತರ ಭ್ರೂಣದಲ್ಲಿ ಕಂಡುಬರುವ ಅಸಹಜತೆ ಮತ್ತು ತಾಯಿಯು ಅನುಭವಿಸುವ ನೋವನ್ನು ಪರಿಗಣಿಸುವಂತಿಲ್ಲ ಎಂದು ತಿಳಿಸಿದ್ದರೂ ಅದರಲ್ಲಿರುವ ಸಾಧ್ಯತೆಗಳನ್ನೂ ನ್ಯಾಯಾಲಯವು ವಿಸ್ತಾರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಧೀಶರಾದ ಆರ್.ಎಂ ಬೊರ್ಡೆ ಮತ್ತು ರಾಜೇಶ್ ಕೇತ್ಕರ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಮಗು ಅಸಹಜತೆಯನ್ನು ಹೊಂದಿ ಹುಟ್ಟುವುದು ಮಾತ್ರವಲ್ಲ ಅದು ಜನಿಸುವವರೆಗೆ ತಾಯಿಯು ಅನುಭವಿಸುವ ವೇದನೆ ಮತ್ತು ಜನನದ ನಂತರದ ನೋವು ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಕೆ ಬದುಕುವ ಸಾಂವಿಧಾನಿಕ ಹಕ್ಕಿಗೆ ಚ್ಯುತಿಯಾಗುತ್ತದೆ ಎಂದು ಮಹಿಳೆಯ ಪರ ವಕೀಲರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News