ಭಾರತಕ್ಕೆ ಮುಂದಿನ ವರ್ಷಗಳಲ್ಲಿ ಅಗಾಧ ಪ್ರಗತಿ ಸಾಧಿಸಲು ಸಾಧ್ಯವಿದೆ : ವಿಶ್ವ ಬ್ಯಾಂಕ್ ವರದಿ

Update: 2018-01-10 06:30 GMT

ವಾಷಿಂಗ್ಟನ್,ಜ.10 :  ಮಹತ್ವಾಕಾಂಕ್ಷಿ ಸರಕಾರವೊಂದು ಸಮಗ್ರ ಸುಧಾರಣೆಗೆ ಒತ್ತು ನೀಡುತ್ತಿರುವುದರಿಂದ ಇತರ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತಕ್ಕೆ ಅಗಾಧ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. 2018ರಲ್ಲಿ ಭಾರತದ ಅಭಿವೃದ್ಧಿ ದರ ಶೇ 7.3 ಆಗಬಹುದೆಂದು ಅಂದಾಜಿಸಿರುವ ವಿಶ್ವ ಬ್ಯಾಂಕ್, ಮುಂದಿನೆರಡು ವರ್ಷಗಳಲ್ಲಿ ಈ ದರ ಶೇ 7.5 ಆಗಬಹುದು ಎಂದು ಅಂದಾಜಿಸಿದೆ.

ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಜಾರಿಯಿಂದಾಗಿ ಸ್ವಲ್ಪ ಹಿನ್ನಡೆಯಾಗಿರುವ ಹೊರತಾಗಿಯೂ  ಭಾರತದ ಅಭಿವೃದ್ಧಿ ದರ 2017ರಲ್ಲಿ ಶೇ 6.7ರಷ್ಟಿತ್ತು ಎಂದು ವಿಶ್ವ ಬ್ಯಾಂಕ್ ಬಿಡುಗಡೆಗೊಳಿಸಿದ 2018 ಗ್ಲೋಬಲ್ ಇಕನಾಮಿಕ್ ಪ್ರಾಸ್ಪೆಕ್ಟ್ ವರದಿಯಲ್ಲಿ ತಿಳಿಸಲಾಗಿದೆ.

ಚೀನಾದ ಅಭಿವೃದ್ಧಿ ದರ ಸ್ವಲ್ಪ ಮಟ್ಟಿಗೆ ಕುಸಿಯುತ್ತಿದ್ದರೆ ಆ ದೇಶವನ್ನು ಹೋಲಿಸಿದಾಗ ಭಾರತದ ಅಭಿವೃದ್ಧಿ ಪ್ರಮಾಣ ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ತಯಾರಿಸಿದ ವಿಶ್ವ ಬ್ಯಾಂಕಿನ ಡೆವಲೆಪ್ಮೆಂಟ್ ಪ್ರಾಸ್ಪೆಕ್ಟ್ಸ್ ಗ್ರೂಪ್ ನಿರ್ದೇಶಕ ಆಯ್ಹನ್ ಕೋಸ್ ಹೇಳಿದ್ದಾರೆ. 

2017ರಲ್ಲಿ ಚೀನಾದ ಅಭಿವೃದ್ಧಿ ದರ  ಭಾರತಕ್ಕಿಂತ ಶೇ 0.1 ಹೆಚ್ಚು ಅಂದರೆ ಶೇ 6.8 ಆಗಿದ್ದರೆ, 218ರಲ್ಲಿ ಅದು ಶೇ 6.4 ಆಗಬಹುದೆಂದು ಅಂದಾಜಿಸಲಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಚೀನಾದ ಅಭಿವೃದ್ಧಿ ದರ ಶೇ 6.3 ಹಾಗೂ ಶೇ 6.2ಗೆ ಕುಸಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನು ಹೋಲಿಸಿದಾಗ ಮುಂದಿನ 10 ವರ್ಷಗಳಲ್ಲಿ ಭಾರತದ ಅಭಿವೃದ್ಧ ದರ ಶೇ 7ರ ಅಸುಪಾಸಿನಲ್ಲಿರಬಹುದೆಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News