ಗುರ್ಮಿತ್ ಸಿಂಗ್ ಬಂಧನದ ವೇಳೆ ಉಂಟಾದ ಹಿಂಸಾಚಾರದಿಂದ 126. 68 ಕೋಟಿ ರೂ. ನಷ್ಟ

Update: 2018-01-16 09:03 GMT

ಚಂಡೀಗಢ, ಜ.16: ಕಳೆದ ಆಗಸ್ಟ್ ನಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ಗುರ್ಮಿತ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾದ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರದಿಂದಾಗಿ  126. 68 ಕೋಟಿ ರೂ. ನಷ್ಟ ಸಂಭವಿಸಿದೆ.

2017 , ಆ.25ರಂದು ಬಾಬಾ ಗುರ್ಮಿತ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಹರಿಯಾಣದಲ್ಲಿ ಗಲಭೆ ಕಂಡು ಬಂದಿತ್ತು. ಹಿಂಸಾಚಾರದಲ್ಲಿ 35 ಮಂದಿ ಬಲಿಯಾಗಿದ್ದರು.  ಸಾರ್ವಜನಿಕ, ಖಾಸಗಿ ಅಪಾರ ಆಸ್ತಿ ಪಾಸ್ತಿಗೆ ಹಾನಿಯಾಗಿತ್ತು.

ಹರಿಯಾಣದ ಅಡ್ವಕೇಟ್ ಜನರಲ್  ಅವರು ಪಂಜಾಬ್ ಮತ್ತು ಹರಿಯಾಣದ ಉಚ್ಚ ನ್ಯಾಯಾಲಯಕ್ಕೆ ನಷ್ಟದ ಬಗ್ಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ತಿಳಿಸಿರುವಂತೆ ಅಂಬಾಲ ಜಿಲ್ಲೆಯಲ್ಲಿ 46.86 ಕೋಟಿ ಮೌಲ್ಯದ ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿದೆ.

ಅಂಬಾಲ ಜಿಲ್ಲೆಯಲ್ಲಿ 46.84 ಕೋಟಿ ರೂ ನಷ್ಟ ಉಂಟಾಗಿದೆ. ಇದರಲ್ಲಿ ಎನ್ ಎಚ್ ಎಐಗೆ 1.86 ಕೋಟಿ ರೂ, ಫತೇಹಾಬಾದ್ 14.87 ಕೋಟಿ ರೂ ಇದರಲ್ಲಿ ರೈಲ್ವೇಸ್ ಗೆ ಆಗಿರುವ ಹಾನಿ 12.50 ಕೋಟಿ ರೂ., ಸಿರ್ಸಾದಲ್ಲಿ 13.57 ಕೋಟಿ ರೂ , ಪಂಚಕುಲದಲ್ಲಿ 14.87 ಕೋಟಿ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News