​ಕಾಂಗ್ರೆಸ್ ಸಖ್ಯ: ಯೆಚೂರಿ ಪ್ರಸ್ತಾವಕ್ಕೆ ಸಿಪಿಎಂ ತಿರಸ್ಕಾರ

Update: 2018-01-22 04:08 GMT

ಹೊಸದಿಲ್ಲಿ, ಜ.22: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಂಡಿಸಿದ್ದ ಕರಡು ರಾಜಕೀಯ ನಿರ್ಣಯವನ್ನು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) ಹಳ್ಳಿಹಾಕಿದೆ.

ಸೀತಾರಾಂ ಯೆಚೂರಿ ಮತ್ತು ಪ್ರಕಾಶ್ ಕಾರಟ್ ಮಂಡಿಸಿದ ಎರಡು ಕರಡು ರಾಜಕೀಯ ನಿರ್ಣಯವನ್ನು, ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಮೂರು ದಿನಗಳ ಕೇಂದ್ರ ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು. ಬಳಿಕ ಮತಕ್ಕೆ ಹಾಕಿದಾಗ ಕಾರಟ್ ನಿರ್ಣಯ 55-31 ಮತಗಳಿಂದ ಆಂಗೀಕಾರವಾಗಿ ಪಕ್ಷದ ಅಧಿವೇಶನಕ್ಕೆ ಸ್ವೀಕಾರವಾಯಿತು.

ಆದರೆ ಯೆಚೂರಿ ಪ್ರಸ್ತಾವಕ್ಕೆ ಹಸಿರು ನಿಶಾನೆ ಸಿಕ್ಕಿಲ್ಲ. ಆದರೆ ಎಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯುವ ಪಕ್ಷದ ಅಧಿವೇಶನದಲ್ಲಿ ಇದನ್ನು ಮತಕ್ಕೆ ಹಾಕಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ. ಇತ್ತೀಚೆಗೆ ರಾಜ್ಯಸಭಾ ಟಿಕೆಟ್ ಪಡೆಯುವಲ್ಲಿ ವಿಫಲರಾದ ಯೆಚೂರಿಗೆ ಇದು ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಇದರಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲು ಅವರ ನೈತಿಕ ಹೊಣೆಯ ಬಗ್ಗೆ ಪ್ರಶ್ನೆ ಎದ್ದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News