ಆರೋಗ್ಯ ಮತ್ತು ಸಂಪತ್ತಿಗಾಗಿ ಭಾರತಕ್ಕೆ ಬನ್ನಿ: ವಿಶ್ವ ನಾಯಕರಿಗೆ ಮೋದಿ ಕರೆ

Update: 2018-01-23 12:34 GMT

ಹೊಸದಿಲ್ಲಿ, ಜ.23: ಡಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ 48ನೆ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ವಿಶ್ವ ನಾಯಕರನ್ನು ಭಾರತಕ್ಕೆ ಆಹ್ವಾನಿಸಿದರು. ಸಮ್ಮೇಳನದಲ್ಲಿ ಮಾತನಾಡಿದ ಅವರು, “ನಿಮಗೆ ಸಂಪತ್ತು, ಆರೋಗ್ಯ, ಬದುಕಿನ ಪರಿಪೂರ್ಣತೆ, ಶಾಂತಿ ಮತ್ತು ಸಮೃದ್ಧಿ ಬೇಕಿದ್ದರೆ ಭಾರತಕ್ಕೆ ಬನ್ನಿ. ನಿಮ್ಮನ್ನು ಎಂದಿಗೂ ಸ್ವಾಗತಿಸುತ್ತೇವೆ” ಎಂದರು.

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾರತವು ಮಹತ್ವದ ಕೊಡುಗೆಗಳನ್ನು ನೀಡಿದೆ. ಜಗತ್ತಿನ ಪ್ರಮುಖ ಶಕ್ತಿಗಳು ಪರಸ್ಪರ ಸಹಕಾರದಿಂದಿರಬೇಕಾಗಿದ್ದು, ದೇಶಗಳ ನಡುವಿನ ಸ್ಪರ್ಧಾತ್ಮಕ ಮನೋಭಾವ ನಮ್ಮ ನಡುವೆ ಗೋಡೆಯಾಗಬಾರದು ಹಾಗು ತಡೆಯಾಗಬಾರದು ಎಂದು ಮೋದಿ ಹೇಳಿದರು.

ಜಗತ್ತಿನ ಆರ್ಥಿಕತೆಯ ಅಭಿವೃದ್ಧಿಯ ವೇಗವನ್ನು ನಾವು ಹೆಚ್ಚಿಸಿದ್ದೇವೆ. ಅಂತಾರಾಷ್ಟ್ರೀಯ ಸಹಕಾರದ ಆಧಾರದಲ್ಲಿನ ನಿಯಮಗಳನ್ನು ಪಾಲಿಸುವುದು ನಮಗೆ ಅತೀ ಮುಖ್ಯವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ, ಜನಸಂಖ್ಯಾಬಲ ಹಾಗು ಸಾಮರ್ಥ್ಯವು ಅಭಿವೃದ್ಧಿಗಾಗಿ ಹಾಗು ದೇಶವು ಗುರಿಯತ್ತ ಸಾಗಲು ಒಟ್ಟಾಗುತ್ತದೆ. ‘ಸುಧಾರಣೆ, ‘ನಿರ್ವಹಣೆ’ ಹಾಗು ‘ಬದಲಾವಣೆ’ ನಮ್ಮ ಮೂಲಮಂತ್ರವಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News