ಪ್ರಥಮ ಬಾರಿಗೆ ಅಷಿಯಾನ್ ದೇಶದ ಸಾಧಕರಿಗೆ ಪದ್ಮಶ್ರೀ ಗೌರವ

Update: 2018-01-26 07:19 GMT

ಹೊಸದಿಲ್ಲಿ, ಜ.26: ಪ್ರತಿಯೊಂದು ಅಷಿಯಾನ್ ದೇಶದ ಒಬ್ಬರು ಸಾಧಕರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಘೋಷಿಸುವ ಮೂಲಕ ಭಾರತ ಸರಕಾರ  ಅಷಿಯಾನ್ ದೇಶಗಳೊಂದಿಗೆ ತನ್ನ ಸಂಬಂಧ ವೃದ್ಧಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗುರುವಾರ ನಡೆದ ಭಾರತ-ಅಷಿಯಾನ್  ಶೃಂಗಸಭೆಯಲ್ಲಿ  ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಭಾರತ-ಅಷಿಯಾನ್ ಸಹಭಾಗಿತ್ವದ ಬೆಳ್ಳಿಹಬ್ಬದ ಸ್ಮರಣಾರ್ಥ  ಪ್ರತಿಯೊಂದು ಅಷಿಯಾನ್ ದೇಶದ ಒಬ್ಬ ವ್ಯಕ್ತಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಪ್ರಧಾನಿ ಘೋಷಿಸಿದ್ದಾರೆ ಎಂದು ಕೇಂದ್ರ  ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಹೆಸರುಗಳು ಇಂತಿವೆ...

ಬ್ರೂನೈ ದೇಶದ ಹಾಜಿ ಅಬ್ದುಲ್ಲಾ ಬಿನ್ ಮಲೈ ಹಾಜಿ ಒಥ್ಮನ್ (ವೈದ್ಯಕೀಯ),  ಕಾಂಬೋಡಿಯಾದ ಹುನ್ ಮೆನಿ (ಸಾರ್ವಜನಿಕ ವ್ಯವಹಾರಗಳು), ಇಂಡೊನೇಷ್ಯಾದ ನ್ಯೋಮನ್ ನುವರ್ಟ (ಕಲೆ), ಲಾವೋಸ್ ನ ಬೌನ್ಲಪ್ ಕಿಯೊಕಂಗ್ನ (ಕಲೆ), ಮ್ಯಾನ್ಮಾರ್ ನ ಥಂಟ್ ಮ್ಯಿಂಟ್ (ಸಾರ್ವಜನಿಕ ವ್ಯವಹಾರಗಳು), ಫಿಲಿಪ್ಪೀನ್ಸ್ ನ ಜೋಸ್ ಜೋ ಕನ್ಸೆಪ್ಶನ್ (ವ್ಯಾಪಾರ-ವಹಿವಾಟು), ಸಿಂಗಾಪುರದ ಟಾಮಿ ಕೋಹ್ (ಸಾರ್ವಜನಿಕ ವ್ಯವಹಾರಗಳು),  ಥಾಯ್ಲೆಂಡ್ ನ ಉನ್ನತ ನಾಯಕ ಸೊಮ್ಡೆಟ್ ಫ್ರಾ ಅರಿಯಾ ವೊಂಗ್ಸ್ ಖೊಟ್ಟಂ ಹಾಗೂ ವಿಯೆಟ್ನಾಂ ನ ಬುದ್ದಿಸ್ಟ್ ಸಂಘದ ಪ್ರಧಾನ ಕಾರ್ಯದರ್ಶಿ  ಎನ್ಗುಯೆನ್ ಟೀನ್ ಥಿಯನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News