ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ: ಒಪ್ಪಿಕೊಂಡ ಅಮಿತ್ ಶಾ

Update: 2018-02-05 11:09 GMT

ಹೊಸದಿಲ್ಲಿ,ಫೆ.5 : ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ ಎಂದು ಒಪ್ಪಿಕೊಂಡ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ, "ನಿರುದ್ಯೋಗಿಯಾಗಿರುವ ಬದಲು ಪಕೋಡಾ ಮಾರುವುದು ಒಳ್ಳೆಯದು,'' ಎಂದು ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿ ತಾವು ಮಾಡಿದ ಭಾಷಣದಲ್ಲಿ ತಿಳಿಸಿದರು.

"ಪಕೋಡಾ ಮಾರಾಟ ಮಾಡುವುದರಲ್ಲಿ ನಾಚಿಕೆ ಪಟ್ಟುಕೊಳ್ಳುವಂತಹ ವಿಷಯವೇನಿಲ್ಲ,'' ಎಂದು ತಮ್ಮ ಭಾಷಣದಲ್ಲಿ ಶಾ ಹೇಳಿದರು.

"ಒಬ್ಬ ವ್ಯಕ್ತಿ ಪಕೋಡಾ ಮಾರಿ ದಿನವೊಂದಕ್ಕೆ ರೂ. 200 ಗಳಿಸಿ ಸಂಜೆ ಮನೆಗೆ ಹಿಂದಿರುಗಿದರೆ ಅದನ್ನು ಉದ್ಯೋಗವೆಂದು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ?'' ಎಂದು ಪ್ರಧಾನಿ ಇತ್ತೀಚೆಗೆ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ ನಂತರ ವಿಪಕ್ಷಗಳ ತೀವ್ರ ಟೀಕೆಗೆ ಪ್ರತಿಕ್ರಿಯಿಸುತ್ತಾ ಶಾ ಮೇಲಿನಂತೆ ಹೇಳಿದ್ದಾರೆ. "ಪಕೋಡಾ ಮಾರಾಟಗಾರನೊಬ್ಬನನ್ನು ಭಿಕ್ಷುಕನಿಗೆ ಹೋಲಿಸುವುದು ಎಷ್ಟಡು ಸರಿ?,'' ಎಂದು ಶಾ ಚಿದಂಬರಂ ಅವರ ಟೀಕೆಯನ್ನು ಉಲ್ಲೇಖಿಸುತ್ತಾ ಪ್ರಶ್ನಿಸಿದರು.

ನಿರುದ್ಯೋಗ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಪಕ್ಷದ ವಿರುದ್ಧವೇ ಕಿಡಿ ಕಾರಿದ ಶಾ "ದೇಶವನ್ನು 55 ವರ್ಷ ಆಳಿದ ಕಾಂಗ್ರಸ್ ಪಕ್ಷ ನಿರುದ್ಯೋಗ ಸಮಸ್ಯೆ ಬಗ್ಗೆ ಏನು ಮಾಡಿದೆ?'' ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News