ರಾಜ್ಯಪಾಲ ಭಾಷಣದ ಮೇಲಿನ ವಂದನಾ ನಿರ್ಣಯ; ಹೊಸ ಸಂಪ್ರದಾಯಕ್ಕೆ ನಾಂದಿ

Update: 2018-02-09 14:30 GMT

ಬೆಂಗಳೂರು, ಫೆ. 9: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸುವ ವಿಚಾರ ವಿಧಾನ ಮಂಡಲ ಜಂಟಿ ಅಧಿವೇಶನದಿಂದ ಬಜೆಟ್ ಅಧಿವೇಶನದವರೆಗೂ ಮುಂದುವರೆಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.

ವರ್ಷದ ಮೊದಲ ಅಧಿವೇಶನ ಜಂಟಿ ಅಧಿವೇಶನವಾಗಿದ್ದು, ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದ ಮೇಲಿನ ವಂದನಾರ್ಪಣ ಪ್ರಸ್ತಾವ ಈ ಬಾರಿಯ ಜಂಟಿ ಅಧಿವೇಶನದಲ್ಲಿ ಅನುಮೋದನೆ ಬದಲು ಬಜೆಟ್ ಅಧಿವೇಶನದವರೆಗೂ ಕೊಂಡೊಯ್ಯಲಾಗುತ್ತಿದೆ.

ಸೋಮವಾರ (ಫೆ.5) ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಶುಕ್ರವಾರ ಜಂಟಿ ಅಧಿವೇಶನ ಕೊನೆಯಾಗುತ್ತಿದೆ. ಫೆ.16ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಆ ಸಂದರ್ಭದಲ್ಲಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ಚರ್ಚೆ ನಡೆದು ಅದಕ್ಕೆ ಸರಕಾರದಿಂದ ಉತ್ತರ ಹಾಗೂ ಭಾಷಣದ ವಂದನಾರ್ಪಣೆ ಸಲ್ಲಿಕೆಗೆ ಅನುಮೋದನೆ ಮಾಡಲು ಉದ್ದೇಶಿಸಲಾಗಿದೆ.

ಆದರೆ, ಇದುವರೆಗಿನ ಅಧಿವೇಶನಗಳಲ್ಲಿ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ, ಸರಕಾರದ ಉತ್ತರ ಹಾಗೂ ಅನುಮೋದನೆ ಪಡೆಯುತ್ತಿದ್ದದ್ದು ಸಂಪ್ರದಾಯವಾಗಿತ್ತು. ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News