ಬೆಂಗಳೂರು : ಫೆಬ್ರವರಿ ಅಂತ್ಯದೊಳಗೆ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ

Update: 2018-02-10 13:10 GMT

ಬೆಂಗಳೂರು, ಫೆ.10: ನಗರದ ವಿವಿಧ ಭಾಗಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಟ್ಯಾಕಿ ಸೇವೆಯನ್ನು ತಿಂಗಳಾಂತ್ಯದಲ್ಲಿ ಆರಂಭಿಸಲಾಗುವುದು ಎಂದು ಏವಿಯೇಷನ್ ಅಧ್ಯಕ್ಷ ಕೆಎನ್‌ಜಿ ನಾಯರ್ ತಿಳಿಸಿದರು.

ಬೆಂಗಳೂರಿನ ದಕ್ಷಿಣ ಹಾಗೂ ಪೂರ್ವ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಪ್ರಯಾಣಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಈ ಭಾಗದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ಇಲ್ಲಿಂದ ಪ್ರಯಾಣಿಸುವವರು ಹೆಲಿಕ್ಯಾಪ್ಟರ್ ಬಳಸಿದರೆ ಹೆಚ್ಚನ ಅನುಕೂಲವಾಗಲಿದೆ.

ಹೆಲಿಕ್ಯಾಪ್ಟರ್ ಟ್ಯಾಕ್ಸಿ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಟಿಕೆಟ್ ಬುಕ್ಕಿಂಗ್‌ಗಾಗಿ ಆ್ಯಪ್‌ವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ವಾರ ಅಧಿಕೃತವಾಗಿ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ಪೂರಕವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಹೆಲಿಪ್ಯಾಡ್‌ಗಳು ಸಾಕಷ್ಟು ಹಿಂದೆಯೆ ಸಿದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎಲೆಕ್ಟ್ರಾನಿಕ್ ಸಿಟಿ 1ನೆ ಹಂತದಲ್ಲಿನ ಹೆಲಿಪ್ಯಾಡ್ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಈ ಹೆಲಿಪ್ಯಾಡ್, ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ 2ನೆ ಹಂತದ ಆರ್‌ವಿ ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವಿನ ಮೆಟ್ರೊ ಮಾರ್ಗದ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಬಳಿಯೇ ಇದೆ. ಇದರಿಂದ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಬಳಸುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ನಾಯರ್ ಹೇಳಿದರು.

►ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರ 3 ಸಾವಿರ ರೂ.
►ಟಿಕೆಟ್ ಬುಕ್ಕಿಂಗ್‌ಗೆ ಮೊಬೈಲ್ ಆ್ಯಪ್ ಬಳಕೆ
►ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ 15 ನಿಮಿಷಗಳ ಹಾರಾಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News