ಆರು ಗಂಟೆಗಳಲ್ಲಿ 2,501 ರಕ್ತ ಪರೀಕ್ಷೆಗಳು: ಮಧ್ಯಪ್ರದೇಶದ ಸಂಸ್ಥೆಯಿಂದ ಹೊಸ ವಿಶ್ವದಾಖಲೆ

Update: 2018-02-15 15:21 GMT

ಖರ್ಗೋನ್ (ಮ.ಪ್ರದೇಶ), ಫೆ.15: 2,501 ಮಂದಿಯ ರಕ್ತದ ಪರೀಕ್ಷೆಯನ್ನು ಆರು ಗಂಟೆಗಳ ಒಳಗೆ ಮಾಡುವ ಮೂಲಕ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬಿಕನ್‌ಗಾಂವ್ ಪಟ್ಟಣದ ಸಾಮಾಜಿಕ ಸಂಸ್ಥೆಯೊಂದು ವಿಶ್ವದಾಖಲೆ ನಿರ್ಮಿಸಿದೆ.

ಲಕ್ಷ ಪರಿವಾರ್ ಹೆಸರಿನ ಸಂಸ್ಥೆಯು ಈ ಹಿಂದೆ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯೊಂದರ ಹೆಸರಲ್ಲಿದ್ದ ದಾಖಲೆಯನ್ನು ಬುಧವಾರದಂದು ತನ್ನ ಹೆಸರಿಗೆ ವರ್ಗಾಯಿಸಿದೆ ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಮನೀಶ್ ವಿಶ್ನೋಯಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸಂಸ್ಥೆಯು ಆರು ಗಂಟೆಗಳಲ್ಲಿ 1,460 ಜನರ ರಕ್ತದ ಪರೀಕ್ಷೆ ನಡೆಸಿತ್ತು.

ವಿಶ್ನೋಯಿಯವರು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ಲಕ್ಷ ಪರಿವಾರ್ ಸಂಸ್ಥೆಯ ಸಂಚಾಲಕರಾದ ಚಂದನ್ ಶರ್ಮಾ ಅವರಿಗೆ ಹಸ್ತಾಂತರಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ತಂಡವು ಇಡೀ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದೆ.

ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸುವ ಇರಾದೆಯಿಂದ ಈ ಕಾರ್ಯಕ್ಕೆ ಪ್ರೇಮಿಗಳ ದಿನವನ್ನು ಆರಿಸಿಕೊಂಡಿರುವುದಾಗಿ ಚಂದನ್ ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News