ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಾಪಸಾದ ಅರವಿಂದರ್ ಸಿಂಗ್

Update: 2018-02-17 08:09 GMT

ಹೊಸದಿಲ್ಲಿ, ಫೆ.17: ಒಂಭತ್ತು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ದಿಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಶನಿವಾರ ಕಾಂಗ್ರೆಸ್‌ಗೆ ವಾಪಸಾಗಿದ್ದಾರೆ.

ದಿಲ್ಲಿಯಲ್ಲಿ ಮುಂಬರುವ 20 ಕ್ಷೇತ್ರಗಳ ಉಪ ಚುನಾವಣೆಗೆ ಮೊದಲು ಸಿಂಗ್ ಸೇರ್ಪಡೆ ಕಾಂಗ್ರೆಸ್‌ಗೆ ಹೊಸ ಶಕ್ತಿ ನೀಡಿದೆ.

‘‘ನಾನು ಬಿಜೆಪಿಗೆ ಸೇರಿದ್ದಾಗ ಈ ನಿರ್ಧಾರದಿಂದ ನನಗೆ ಖುಷಿಯಾಗಿಲ್ಲ ಎಂದಿದ್ದೆ. ಅಜಯ್ ಮಾಕೆನ್‌ರೊಂದಿಗೆ ಮಾತನಾಡಿ ಅವರೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದೇನೆ. ಸೈದ್ದಾಂತಿಕವಾಗಿ ಬಿಜೆಪಿ ನನಗೆ ಸರಿಹೊಂದುವುದಿಲ್ಲ’’ ಎಂದು ಸಿಂಗ್ ಹೇಳಿದ್ದಾರೆ.

‘‘ಸಿಂಗ್ ಕಾಂಗ್ರೆಸ್‌ಗೆ ವಾಪಸಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ’’ ಎಂದು ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ.

ಸಿಂಗ್ ಕಳೆದ ವರ್ಷದ ಎಪ್ರಿಲ್‌ನಲ್ಲಿ ಬಿಜೆಪಿಗೆ ಸೇರಿದ್ದರು. ಕಾಂಗ್ರೆಸ್ ಎಂಸಿಡಿ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News