ಕರ್ನಾಟಕ ಆಧಾರ್ ವಿಧೇಯಕ ಮಂಡನೆ

Update: 2018-02-20 16:48 GMT

ಬೆಂಗಳೂರು, ಫೆ.20: ಕರ್ನಾಟಕ ಆಧಾರ್(ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕ-2018 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಉದ್ದೇಶ ಮತ್ತು ಕಾರಣಗಳು: ಆಧಾರ್ ಗುರುತಿಸುವಿಕೆಯ ಮೂಲಕ ರಾಜ್ಯ ಸರಕಾರದ ಅಥವಾ ಅದರ ಏಜೆನ್ಸಿಗಳ ಈ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ರೀತಿಯ ಸಬ್ಸಿಡಿಗಳು, ಪ್ರಯೋಜನಗಳು, ಸೇವೆಗಳು, ಅನುದಾನಗಳು, ಮಜೂರಿಗಳು ಮತ್ತು ಇತರ ಸಾಮಾಜಿಕ ಪ್ರಯೋಜನಕಾರಿ ಯೋಜನೆಗಳ ವಿತರಣೆಗಾಗಿ ಉದ್ದೇಶಿತ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಲು.

ಫಲಾನುಭವಿಗಳಿಗೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು ತಲುಪುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು. ರಾಜ್ಯದ ಸಂಚಿತ ನಿಧಿಯಿಂದ ಅಥವಾ ಇತರ ಏಜೆನ್ಸಿಗಳಿಂದ ನಿಧಿಯನ್ನು ಪಡೆದ ವಿವಿಧ ರೀತಿಯ ಸಬ್ಸಿಡಿಗಳು, ಪ್ರಯೋಜನಗಳು, ಸೇವೆಗಳು, ಅನುದಾನಗಳು, ಮಜೂರಿಗಳು ಮತ್ತು ಇತರ ಸಾಮಾಜಿಕ ಪ್ರಯೋಜನ ಯೋಜನೆಗಳ ವಿತರಣೆಗಾಗಿ ಆಧಾರ್ ಗುರುತಿಸುವಿಕೆಯ ಬಳಕೆಯನ್ನು ಜೋಡಿಸಲು.

 ಮತ್ತು, ಆಧಾರ್ ಅನ್ನು ಏಕೈಕ ಗುರುತಿಸುವಿಕೆಯೆಂದು ಬಳಸಿ ರಾಜ್ಯ ಸರಕಾರದ ಯಾವುದೇ ಏಜೆನ್ಸಿಯ ಮೂಲಕ ಭರಿಸಿದ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉತ್ತಮ ನಿರ್ವಹಣೆ, ದಕ್ಷ, ಪಾರದರ್ಶಕ ಮತ್ತು ಉದ್ದೇಶಿತ ವಿತರಣೆಗೆ ಸಹಕಾರ ಕಲ್ಪಿಸಲು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News