ರಕ್ಷಣಾ ಇಲಾಖೆ: ಬಂಡವಾಳ ಸ್ವಾಧೀನ ಪ್ರಸ್ತಾವಕ್ಕೆ ಸಮ್ಮತಿ

Update: 2018-02-20 17:18 GMT

ಹೊಸದಿಲ್ಲಿ, ಫೆ.20: ಸೇನಾಪಡೆಯ ಕ್ಷಿಪ್ರ ಕಾರ್ಯನಿರ್ವಹಣೆಗೆ ಸಹಾಯವಾಗುವ 156 ಅತ್ಯಾಧುನಿಕ ವಾಹನಗಳನ್ನು ಖರೀದಿಸುವುದೂ ಸೇರಿದಂತೆ 1,850 ಕೋಟಿ ರೂ. ಮೊತ್ತದ ಬಂಡವಾಳ ಸ್ವಾಧೀನ ಪ್ರಸ್ತಾವನೆಗೆ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.

ರಕ್ಷಣಾ ಇಲಾಖೆಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿಯಾದ ‘ಡಿಫೆನ್ಸ್ ಅಕ್ವಿಜಿಷನ್ ಕೌನ್ಸಿಲ್(ಡಿಎಸಿ)’ ನ ಸಭೆಯಲ್ಲಿ ಸುದೀರ್ಘ ಕಾಲದಿಂದ ಬಾಕಿಯಿದ್ದ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.

  156 ಪದಾತಿದಳ ವಾಹನಗಳ ಖರೀದಿಯಿಂದ ಸೇನೆಯನ್ನು ಅಗತ್ಯವಿದ್ದೆಡೆ ಕ್ಷಿಪ್ರವಾಗಿ ನಿಯೋಜಿಸಲು ಸಾಧ್ಯವಾಗುತ್ತದೆ. ಅಲ್ಲದೆ ನೌಕಾಪಡೆಗೆ ಅಗತ್ಯವಿರುವ ‘ಹೈಡ್ರೊಗ್ರಾಫಿಕ್’ ಕಣ್ಗಾವಲು ವ್ಯವಸ್ಥೆ ಪಡೆಯಲು 626 ಕೋಟಿ ರೂ. ವೆಚ್ಚದಲ್ಲಿ ‘ಸರ್ವೆ ಟ್ರೈನಿಂಗ್ ವೆಸೆಲ್’ ನಿರ್ಮಾಣಕ್ಕೆ ಕೂಡಾ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News