ಬೆಂಗಳೂರು: ಫೆ.21 ರಿಂದ ನ್ಯಾಷನಲ್ ಮಾಸ್ಟ್‌ರ್ಸ್ ಕ್ರೀಡಾಕೂಟ

Update: 2018-02-20 18:08 GMT

ಬೆಂಗಳೂರು, ಫೆ.20: ಅಡ್ವೋಕೇಟ್ ಮಾಸ್ಟರ್ಸ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಫೆ.21 ರಿಂದ ಐದು ದಿನಗಳ ಕಾಲ 39ನೆ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2018 ಕ್ರೀಡಾಕೂಟವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್‌ನ ಮುಖಂಡ ಹಾಗೂ ಆಯೋಜಕರಾದ ಬಿ.ಎಚ್.ಗವಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಸಚಿವ ಎಚ್.ಎಂ.ರೇವಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಒಕ್ಕೂಟ ಪ್ರದೇಶಗಳು, ಕಾರ್ಪೊರೇಟ್ ಸೆಕ್ಟರ್ ಸೇರಿ ವಿವಿಧ 27 ರಾಜ್ಯಗಳಿಂದ 4 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಹೆಸರಾಂತ ಕ್ರೀಡಾಪಟುಗಳಾದ ಸ್ಟ್ಯಾನ್ ಪರ್ಕಿನ್ಸ್, ಮರಿಯಾ ಆಲರೋ, ವಿನ್ಸ್‌ಟನ್ ಥಾಮಸ್, ವಿಲ್ಮಾಘಿ ಸೇರಿದಂತೆ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಲಿಂಪಿಕ್‌ನಲ್ಲಿ ನಡೆಯುವ ಪಂಜಿನ ಮೆರವಣಿಗೆ ರೀತಿಯಲ್ಲಿ ಇಲ್ಲಿಯೂ ಮೆರವಣಿಗೆ ನಡೆಯಲಿದ್ದು, ನಗರದ ಸಿಟಿ ಸಿವಿಲ್ ಕೋರ್ಟ್‌ನಿಂದ ಕೆ.ಆರ್.ವೃತ್ತ, ಹೈಕೋರ್ಟ್, ಕಬ್ಬನ್ ಪಾರ್ಕ್ ಮೂಲಕ ಕಂಠೀರವ ಕ್ರೀಡಾಂಗಣ ತಲುಪಲಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News