ಬೆಂಗಳೂರು: ಬೆಂಕಿ ಆಕಸ್ಮಿಕ; ಬಟ್ಟೆ ಅಂಗಡಿ ಸುಟ್ಟು ಭಸ್ಮ

Update: 2018-02-21 05:18 GMT

ಬೆಂಗಳೂರು, ಫೆ.21:  ನಿರ್ಮಾಣ ಹಂತದ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಕಟ್ಟಡದಲ್ಲಿದ್ದ ಬಟ್ಟೆ ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡ ಘಟನೆ ಬೆಂಗಳೂರಿನ  ಹೆಗಡೆ ನಗರದಲ್ಲಿ ವರದಿಯಾಗಿದೆ.

ಕೆಳ ಮಹಡಿಯಲ್ಲಿರುವ  ಬಟ್ಟೆ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ವ್ಯಾಪಿಸಿತ್ತು. ಪರಿಣಾಮವಾಗಿ ಬಟ್ಟೆ ಅಂಗಡಿ ಸುಟ್ಟು ಭಸ್ಮವಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದರು.

ಈ ಬಗ್ಗೆ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News