ಇಂಡೋನೇಷ್ಯಾದಲ್ಲಿ ಮೊಟ್ಟೆ ಇಡುವ ಬಾಲಕ ..!

Update: 2018-02-23 07:10 GMT

ಜಕಾರ್ತ, ಫೆ.23: ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಸಸ್ತನಿಗಳಾದ ಪ್ರಾಣಿಗಳಿಗೆ ಮೊಟ್ಟೆ ಇಡಲು ಸಾಧ್ಯವೇ ? ಹಾಗಿದ್ದರೆ ಈ ಗುಂಪಿಗೆ  ಸೇರಿದ  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ?  ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !

ಇಂಡೋನೇಷ್ಯಾದಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿ ಪ್ರಾಂತ್ಯದ ಗೊವಾ ಎಂಬಲ್ಲಿ 14ರ ಹರೆಯದ ಬಾಲಕನೊಬ್ಬನು ಮೊಟ್ಟೆ ಇಡುತ್ತಿದ್ದಾನೆ.  2015ರಿಂದ ಈ  ತನಕ  ಬಾಲಕ ಅಕ್ಮಲ್ 20 ಮೊಟ್ಟೆಗಳನ್ನು ಇಟ್ಟಿದ್ದಾನೆ ಎಂದು ಆತನ ತಂದೆ ಮಾಹಿತಿ ನೀಡಿದ್ದಾರೆ.

ಕೋಳಿ ಮೊಟ್ಟೆಯನ್ನು ಹೋಲುವ ಬಿಳಿ ಬಣ್ಣದ ಮೊಟ್ಟೆಯನ್ನು ಬಾಲಕ ತಿಂಗಳಿಗೆ ಎರಡರಂತೆ ಇಡುತ್ತಿದ್ದಾನೆ. ಇದು ವೈದ್ಯಕೀಯ ಜಗತ್ತಿಗೆ ಸವಾಲೆನಿಸಿಕೊಂಡಿದೆ.

ಬಾಲಕ ಮೊಟ್ಟೆ ಇಡುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಾರಣ ಪತ್ತೆ ಹಚ್ಚಲು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರ ಎದುರಿನಲ್ಲೇ ಬಾಲಕ ಎರಡು ಮೊಟ್ಟೆಗಳನ್ನು ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News