ಲಯ-ಛಂದಸ್ಸು ಇಲ್ಲದೆ ಪದ್ಯ ರಚಿಸಲು ಕಷ್ಟ: ಪ್ರೊ.ಕೆ.ಎಸ್.ನಿಸಾರ್ ಅಹಮದ್

Update: 2018-02-25 12:47 GMT

ಬೆಂಗಳೂರು, ಫೆ.25: ಲಯ ಮತ್ತು ಛಂದಸ್ಸು ಇಲ್ಲದೇ ಪದ್ಯವನ್ನು ರಚಿಸಲು ಬರುವುದಿಲ್ಲ. ಹಾಗೊಂದು ವೇಳೆ ಲಯ-ಛಂದಸ್ಸ ಇಲ್ಲದೆ ಪದ್ಯ ರಚಿಸಿದರೂ ಅಂಥ ಪದ್ಯಗಳಿಗೆ ಯಾವುದೆ ಮಹತ್ವ ಇರುವುದಿಲ್ಲ ಎಂದು ಹಿರಿಯ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಾಗೂರು ಕಲಾ ವೇದಿಕೆ ಆಯೋಜಿಸಿದ್ದ ಭಾವಚೈತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಗೂರು ಮಾರ್ಕಾಂಡೇಯ ಅವರು ಕವಿ ಆಗುವುದರ ಜೊತೆಗೆ ಕಲಾವಿದ, ಸಂಗೀತಗಾರರಾಗಿದ್ದು, ವಿರಹಿಯ ಸಿರಿಗೊಳಲು ಎಂಬ ಕೃತಿಯನ್ನು ರಚಿಸಿ ಕನ್ನಡದ ಗ್ರಂಥಭಂಡಾರವನ್ನು ಮತ್ತಷ್ಟು ಸಮೃದ್ಧಗೊಳಿಸಿದ್ದಾರೆ. ಕವಿ ಬಾಗೂರು ಮಾರ್ಕಾಂಡೇಯ ಅವರು ದಿನದ ಯಾವ ವೇಳೆಯಲ್ಲಾದರೂ ಪದ್ಯ ಹಾಗೂ ಕವನವನ್ನು ರಚಿಸಿ ನಾಡಿಗೆ ನೀಡುವ ಶಕ್ತಿಯನ್ನು ಹೊಂದಿದ್ದಾರೆಂದು ಹೇಳಿದರು.

ಬಾಗೂರು ಅವರು ಸಜ್ಜನ್, ಶಾಂತಿ ಸ್ವಭಾವದವರಾಗಿದ್ದು, ತಮ್ಮ ಪದ್ಯ ಹಾಗೂ ಕಲೆಯ ಮೂಲದ ನಾಡಿಗೆ ಚಿರಪರಿಚಿತರಾಗಿದ್ದಾರೆ. ತಾವು 70 ವರ್ಷ ದಾಟಲು ನಿಮ್ಮೆಲ್ಲರ ಪ್ರೀತಿ ವಿಶ್ವಾಸವೆ ಕಾರಣವೆಂದು ನಿಸಾರ್ ಅಹಮದ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕವಿ ಗೋಪಿ, ರಂಗಕರ್ಮಿ ಕೆ.ರೇವಣ್ಣ , ವಾನಿ ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News