ಪುತಿನ್ ಜೊತೆ ಮರ್ಕೆಲ್, ಮಾಕ್ರೊನ್ ಮಾತುಕತೆ

Update: 2018-02-25 17:52 GMT

  ವಿಶ್ವಸಂಸ್ಥೆ,ಫೆ.25: ಸಿರಿಯದಲ್ಲಿ 30 ದಿನಗಳ ಕದನವಿರಾಮವನ್ನು ಘೋಷಿಸಬೇಕೆಂಬ ನಿರ್ಣಯವನ್ನು ಭದ್ರತಾ ಮಂಡಳಿ ಅಂಗೀಕರಿಸಿದ ಬೆನ್ನಲ್ಲೇ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೊನ್ ಹಾಗೂ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮಾರ್ಕೆಲ್ ಅವರು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆ ದೂರವಾಣಿ ಸಂಭಾಷಣೆ ನಡೆಸಲಿದ್ದು, ಶೀಘ್ರವೇ ಕದನವಿರಾಮವನ್ನು ಜಾರಿಗೊಳಿಸಲು ಮುತುವರ್ಜಿ ವಹಿಸುವಂತೆ ಆಗ್ರಹಿಸಲಿದ್ದಾರೆ. ಸಿರಿಯದಲ್ಲಿ ರಶ್ಯದ ಸೇನೆಯು ಬಂಡುಕೋರರ ವಿರುದ್ಧ ಸಮರ ಸಾರಿರುವ ಸಿರಿಯ ಅಧ್ಯಕ್ಷ ಬಶಾರ್ ಅಸ್ಸಾದ್‌ಗೆ ಅವರಿಗೆ ಸೇನಾ ನೆರವು ನೀಡುತ್ತಿದೆ.

 ಭದ್ರತಾ ಮಂಡಳಿಯು ಗುರುವಾರವೇ ನಿರ್ಣಯವನ್ನು ಅಂಗೀಕರಿಸಲಿತ್ತಾದರೂ, ನಿರ್ಣಯದ ವಿರುದ್ಧ ರಶ್ಯ ವಿಟೋ ಚಲಾಯಿಸುವುದನ್ನು ತಡೆಯಲು ಅದು ಮಾತುಕತೆಗಳನ್ನು ಮುಂದುವರಿಸಿದ್ದರಿಂದ ಮತದಾನ ವಿಳಂಬಗೊಂಡಿತ್ತು.ಕಳೆದ ಎಂಟು ವರ್ಷಗಳಿಂದ ಭೀಕರ ಅಂತರ್‌ಯುದ್ಧಕ್ಕೆ ಸಾಕ್ಷಿಯಾಗಿರುವ ಸಿರಿಯದಲ್ಲಿ 3.40 ಲಕ್ಷ ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News