ಸಕಲ ಸರಕಾರಿ ಗೌರವಗಳೊಂದಿಗೆ ಶ್ರೀದೇವಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

Update: 2018-02-28 09:24 GMT

 ಮುಂಬೈ, ಫೆ.28: ದುಬೈನ ಹೊಟೇಲ್‌ನಲ್ಲಿ ಶನಿವಾರ ನಿಧನರಾಗಿರುವ ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅಂತ್ಯ ಸಂಸ್ಕಾರ ಉಪ ನಗರ ವಿಲೇಪಾರ್ಲೆಯ ಸೇವಾ ಸಮಾಜ ಚಿತಾಗಾರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಬುಧವಾರ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರ ತನಕ ಲೋಖಂಡವಾಲಾದ ದಿ ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ರೀದೇವಿ ಯ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಯಿತು.

ಅಂಧೇರಿಯ ಸ್ಪೋಟ್ಸ್ ಕ್ಲಬ್‌ನಿಂದ ಬಿಳಿ ಹೂಗಳಿಂದ ಅಲಂಕೃತ ವಾಹನದಲ್ಲಿ ಮಧ್ಯಾಹ್ನ 2 ಗಂಟೆಗೆ ಶ್ರೀದೇವಿಯ ಅಂತಿಮ ಯಾತ್ರೆ ಆರಂಭವಾಗಿದೆ. ವಿಲೇಪಾರ್ಲೆಯ ರುದ್ರಭೂಮಿಯಲ್ಲಿ ಮಧ್ಯಾಹ್ನ 3:30ರ ಸುಮಾರಿಗೆ ಅಂತಿಮ ವಿಧಿವಿಧಾನ ನೆರವೇರಲಿದೆ. ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಅಯ್ಯಂಗಾರ್ ಸಂಪ್ರದಾಯದಂತೆ ಶ್ರೀದೇವಿ ಇಷ್ಟಪಡುವ ಕೆಂಪು ಕಾಂಚೀರಂ ಸೀರೆ ತೊಡಿಸಿ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ.

ತಮ್ಮ ನೆಚ್ಚಿನ ನಟಿಗೆ ಅಂತಿಮ ನಮನ ಸಲ್ಲಿಸಲು ಬಾಲಿವುಡ್‌ನ ನಟ-ನಟಿಯರು, ಗಣ್ಯರು, ಅಭಿಮಾನಿಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು, ಮೆರವಣಿಗೆಯಲ್ಲೂ ಭಾಗಿಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News