ರಾಜಕೀಯದಲ್ಲಿ ರಾಹುಲ್ ನರ್ಸರಿ ವಿದ್ಯಾರ್ಥಿ: ಹಿಮಂತ್ ಬಿಸ್ವಾ ಸರ್ಮಾ

Update: 2018-03-03 16:50 GMT

ಅಗರ್ತಲ, ಮಾ. 3: ಬಿಜೆಪಿಯ ಅಮಿತ್ ಶಾ ಸ್ನಾತಕೋತ್ತರ ವಿದ್ಯಾರ್ಥಿಯಾದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಲೂ ನರ್ಸರಿ ಕ್ಲಾಸ್ ಎಂದು ಅಸ್ಸಾಂ ಸಚಿವ ಹಿಮಂತ್ ಬಿಸ್ವಾಸ್ ಸರ್ಮಾ ಶನಿವಾರ ಹೇಳಿದ್ದಾರೆ. ಸರ್ಮಾ ಅವರು ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದರು. 2015ರಲ್ಲಿ ಬಿಜೆಪಿ ಸೇರುವ ಮುನ್ನ ಸರ್ಮಾ ಆಗಿನ ತರುಣ್ ಗಗೋಯ್ ನೇತೃತ್ವದ ಕಾಂಗ್ರೆಸ್ ಸರಕಾರದ ಸಚಿವರಾಗಿದ್ದರು.

ಶಾ ಹಾಗೂ ರಾಹುಲ್ ಗಾಂಧಿ ಅವರು ಕಾರ್ಯಾಚರಣೆ ಶೈಲಿಯನ್ನು ಹೋಲಿಸುವಂತೆ ಕೇಳಿದಾಗ ಶರ್ಮಾ, ‘‘ರಾಜಕೀಯದಲ್ಲಿ ಅಮಿತ್ ಶಾ ಸ್ನಾತಕೋತ್ತರ ವಿದ್ಯಾರ್ಥಿಯಾದರೆ, ರಾಹುಲ್ ಗಾಂಧಿ ಈಗಲೂ ನರ್ಸರಿ ಕ್ಲಾಸ್’’ ವಿದ್ಯಾರ್ಥಿ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 2016 ವಿಧಾನ ಸಭೆ ಚುನಾವಣೆ ಸರ್ಬಾನಂದ ಸೋನೋವಾಲ ನೇತೃತ್ವದ ಬಿಜೆಪಿ ಸರಕಾರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸಚಿವರಾಗಿದ್ದರು. ರಾಹುಲ್ ಗಾಂಧಿ ಅವರ ಕಾರ್ಯಾಚರಣೆ ಬಗ್ಗೆ ಶರ್ಮಾ ಈ ಹಿಂದೆ ಕೂಡ ಟೀಕಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಜಕೀಯದ ಬಗ್ಗೆ ಗಂಭೀರತೆ ಹೊಂದಿಲ್ಲ ಹಾಗೂ ಅವರು ನಾಯಿಗೆ ಆಹಾರ ತಿನ್ನಿಸುವುದರಲ್ಲೇ ಬ್ಯುಸಿ ಆಗಿದ್ದಾರೆ ಎಂದು ಅವರು ಹೇಳಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News