ಎಂಎಚ್370 ವಿಮಾನಕ್ಕಾಗಿ ಶೋಧ ಜೂನ್‌ನಲ್ಲಿ ಅಂತ್ಯ: ಮಲೇಶ್ಯ

Update: 2018-03-03 17:25 GMT

ಕೌಲಾಲಂಪುರ, ಮಾ. 3: ನಾಲ್ಕು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಅವಶೇಷಗಳಿಗಾಗಿ ಅಮೆರಿಕದ ಕಂಪೆನಿಯೊಂದು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಜೂನ್‌ನಲ್ಲಿ ಮುಗಿಯುವ ಸಾಧ್ಯತೆಯಿದೆ ಎಂದು ಮಲೇಶ್ಯದ ನಾಗರಿಕ ವಾಯುಯಾನ ಸಂಸ್ಥೆಯ ಮುಖ್ಯಸ್ಥ ಅಝರುದ್ದೀನ್ ಅಬ್ದುಲ್ ರಹಮಾನ್ ಹೇಳಿದ್ದಾರೆ.

ಜಗತ್ತಿನ ವಾಯುಯಾನ ಇತಿಹಾಸದಲ್ಲೇ ಅತ್ಯಂತ ನಿಗೂಢವಾಗಿರುವ ಈ ವಿಮಾನ ಕಣ್ಮರೆಯ ಕಗ್ಗಂಟು ನಾಲ್ಕನೆ ವಾರ್ಷಿಕ ದಿನದ ವೇಳೆಗೆ ಬಗೆಹರಿಯವುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

2014 ಮಾರ್ಚ್ 8ರಂದು 239 ಮಂದಿಯನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರುತ್ತಿದ್ದ ವಿಮಾನವು ನಾಪತ್ತೆಯಾಗಿತ್ತು.

ಹ್ಯೂಸ್ಟನ್‌ನ ‘ಓಶನ್ ಇನ್‌ಫಿನಿಟಿ’ ಸಂಸ್ಥೆಯು ಜನವರಿ 22ರಂದು ಶೋಧ ಆರಂಭಿಸಿದೆ. ‘ಅವಶೇಷಗಳು ಪತ್ತೆಯಾದರೆ ಮಾತ್ರ ಶುಲ್ಕ’ ಎಂಬ ಒಪ್ಪಂದಕ್ಕೆ ಮಲೇಶ್ಯ ಅದರೊಂದಿಗೆ ಸಹಿ ಹಾಕಿದೆ.

ಈ ಮೊದಲಿನ ಅಗಾಧ ವೆಚ್ಚದ ಶೋಧ ಕಾರ್ಯಾಚರಣೆಯು ನಿಷ್ಪ್ರಯೋಜಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News