ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸರಕಾರ ಮಾನ್ಯತೆ ನೀಡಲಿ: ಪ್ರೊ.ಚಂಪಾ

Update: 2018-03-05 12:24 GMT

ಬೆಂಗಳೂರು, ಮಾ.5: ರಾಜ್ಯ ಸರಕಾರವೇ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ ಬಳಿಕ ಕೇಂದ್ರ ಸರಕಾರಕ್ಕೆಶಿಫಾರಸ್ಸು ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಸಭಾ ಮಾರ್ಗದರ್ಶಕ ಮಂಡಳಿ ಮುಖ್ಯಸ್ಥ, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಒತ್ತಾಯಿಸಿದರು.

ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಆಂದೋಲನದ ಬೇಡಿಕೆಗೆ ಉತ್ತಮ ರೀತಿಯಲ್ಲೇ ರಾಜ್ಯ ಸರಕಾರ ಸ್ಪಂದಿಸಿದೆ. ಮುಂದೆಯೂ ಇದೇ ಸಹಕಾರ ಇರಬೇಕು. ಅಲ್ಪಸಂಖ್ಯಾತ ಆಯೋಗದ ಸಲಹೆ ಮೇರೆಗೆ ತಜ್ಞರ ಸಮಿತಿ ರಚನೆಯಾಗಿತ್ತು. ಅದರಂತೆಯೇ ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಸ್ವಾಗತಾರ್ಹ. ಶೀಘ್ರವಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಹೇಳಿದರು.

ನಾಗಮೋಹನದಾಸ್ ಅವರ ವರದಿ ತರಾತುರಿಯಲ್ಲಿ ರೂಪಿತವಾಗಿಲ್ಲ, ಎಲ್ಲಾ ಆಯಾಮಗಳನ್ನು ಅಧ್ಯಯನ ನಡೆಸಿಯೇ ಸಮಿತಿ ವರದಿ ನೀಡಿದೆ. ಅದನ್ನು ಶೀಘ್ರ ಜಾರಿಗೆ ತರಬೇಕೆಂಬುವುದು ಎಲ್ಲರ ಆಸೆಯಾಗಿದೆ ಎಂದ ಅವರು, ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಅವರು ದಾಖಲೆ ಸಮೇತ ಲಿಂಗಾಯತ ಹಳೇಯ ಧರ್ಮವೆಂದು ಸಾಬೀತು ಪಡೆಸಿದ್ದರು. ಇದು ರಾಜಕೀಯಕ್ಕಾಗಿ ಕೇಳುತ್ತಿಲ್ಲ ಎಂದು ನುಡಿದರು.

ಕನ್ನಡಿಗರೇ ರಾಜ್ಯಸಭೆಗೆ ಬೇಕು
ಕರ್ನಾಟಕದಿಂದ ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಯಾವುದೇ ಪಕ್ಷ ಇರಲಿ ಕನ್ನಡಿಗರನ್ನು ಆಯ್ಕೆ ಮಾಡಬೇಕು. ಆ ಸದಸ್ಯರು ರಾಜ್ಯಸಭೆಯಲ್ಲಿ ಕನ್ನಡ ನಾಡು, ನುಡಿಯ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆಯೇ ದನಿ ಎತ್ತಬೇಕು’
-ಚಂದ್ರಶೇಖರ ಪಾಟೀಲ ಹಿರಿಯ ಸಾಹಿತಿ

‘ಲಿಂಗಾಯೇತರರು ಮಾತನಾಡುವುದು ಬೇಡ’
 ಲಿಂಗಾಯತ ಸ್ವಾತಂತ್ರ ಧರ್ಮದ ವಿಚಾರದಲ್ಲಿ ಲಿಂಗಾಯೇತರರು ಅನಗತ್ಯವಾಗಿ ಪ್ರತಿಕ್ರಿಯೆ ನೀಡುವುದು ಬೇಡ. ಇದು ನಮ್ಮ ಧರ್ಮಕ್ಕೆ ಸಂಬಂಧಿಸಿದ ವಿಚಾರ. ಬೇರೆ ಧರ್ಮದವರು ಇದರಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು’
-ಚಂದ್ರಶೇಖರ ಪಾಟೀಲ ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News