ರೊಹಿಂಗ್ಯಾ ವಿರುದ್ಧದ ಹಿಂಸಾಚಾರದಲ್ಲಿ ‘ಜನಾಂಗೀಯ ಹತ್ಯೆ’ ಲಕ್ಷಣಗಳಿವೆ: ವಿಶ್ವಸಂಸ್ಥೆಯ ಪ್ರತಿನಿಧಿ

Update: 2018-03-13 16:43 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಮಾ. 13: ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ಮೇಲೆ ಸೇನೆ ನಡೆಸುತ್ತಿರುವ ದಾಳಿಯು ‘ಜನಾಂಗೀಯ ಹತ್ಯೆ’ಯ ಲಕ್ಷಣಗಳನ್ನು ಹೊಂದಿದೆ ಎಂದು ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಯಾಂಗೀ ಲೀ ಹೇಳಿದ್ದಾರೆ ಹಾಗೂ ಇದಕ್ಕೆ ಸರಕಾರವನ್ನು ಉತ್ತರದಾಯಿಯನ್ನಾಗಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬ ವಿಶ್ವಸಂಸ್ಥೆಯ ಆರೋಪಗಳನ್ನು ಮ್ಯಾನ್ಮಾರ್ ನಿರಾಕರಿಸುತ್ತಾ ಬಂದಿದೆ.

ಆದರೆ, ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಬಣ್ಣಿಸಲು ಈ ಪದ (ಜನಾಂಗೀಯ ನಿರ್ಮೂಲನೆ) ಸಾಕಾಗುವುದಿಲ್ಲ ಎಂದು ಸೋಮವಾರ ಇಲ್ಲಿನ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾತನಾಡಿದ ದಕ್ಷಿಣ ಕೊರಿಯದ ರಾಜತಾಂತ್ರಿಕೆ ಯಾಂಗೀ ಲೀ ಹೇಳಿದರು.

‘‘ಅಲ್ಲಿ ನಡೆಯುತ್ತಿರುವ ಅಪರಾಧಗಳು ಜನಾಂಗೀಯ ಹತ್ಯೆಯ ಲಕ್ಷಣಗಳನ್ನು ಹೊಂದಿದೆ ಎಂಬ ಬಗ್ಗೆ ನನಗೆ ಖಾತರಿಯಾಗಿದೆ. ಇದಕ್ಕೆ ಆ ದೇಶ ಹೊಣೆ ಹೊರಬೇಕೆಂದು ನಾನು ದೃಢವಾಗಿ ಪ್ರತಿಪಾದಿಸುತ್ತೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News