ಬೆಂಗಳೂರು: ಬಾಲಕನ ದೃಷ್ಟಿ ಮರುಕಳಿಸಿದ ಯಶಸ್ವಿ ಶಸ್ತ್ರಚಿಕಿತ್ಸೆ

Update: 2018-03-14 16:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.14: ಕುರುಡುತನದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಶಸ್ತ್ರಚಿಕಿತ್ಸೆಯ ಮೂಲಕ ದೃಷ್ಟಿ ಮರುಕಳಿಸುವಲ್ಲಿ ಅಗರವಾಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಡೆಂಕಣಿಕೋಟೆ ತಾಲೂಕಿನ ಶಕ್ತಿವೇಲ್ ಕಣ್ಣಿಗೆ ಸುಣ್ಣದ ಪೌಡರ್ ಆಕಸ್ಮಿಕವಾಗಿ ಬಿದ್ದ ಪರಿಣಾಮ ಕಣ್ಣು ಸಂಪೂರ್ಣ ಮಂದವಾಗಿ ಕುರುಡುತನ ಆವರಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಆಗರವಾಲ್ ಆಸ್ಪತ್ರೆ ಹಿರಿಯ ವೈದ್ಯ ಡಾ.ರಘು ನೇತೃತ್ವದ ತಂಡ ಕಾಂಜುಕ್ಟಿವಲ್ ಲಿಂಬಲ್ ಸೆಲ್ ಶಸ್ತ್ರ ಚಿಕಿತ್ಸೆಯ ಮೂಲಕ ಕಣ್ಣಿನ ದೃಷ್ಟಿಯನ್ನು ಮರಳಿ ಬರುವಂತೆ ಮಾಡಿದ್ದಾರೆ.

ಈ ಕುರಿತು ಶಕ್ತಿವೇಲ್‌ನ ತಂದೆ ಗೋವಿಂದಪ್ಪ ಮಾತನಾಡಿ, ನನ್ನ ಮಗನಿಗೆ ದೃಷ್ಟಿ ಮರಳಿ ಬರುತ್ತದೆ ಎಂಬ ವಿಶ್ವಾಸ ಇರಲಿಲ್ಲ. ಆದರೆ, ಅಗರವಾಲ್ ಆಸ್ಪತ್ರೆಯ ವೈದ್ಯರು ನನ್ನ ಮಗನಿಗೆ ಬೆಳಕು ನೀಡಿದ್ದಾರೆ. ಈ ವೈದ್ಯರಿಗೆ ಸದಾ ಕೃತಜ್ಞರಾಗಿರುತ್ತೇವೆಂದು ಸಂತಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News