ಟ್ರಂಪ್‌ಗೆ ಗಡಿ ಗೋಡೆ ನಿರ್ಮಾಣಕ್ಕೆ ಬಯಸಿದ್ದ ವ್ಯಕ್ತಿ ಮಸೀದಿಗೆ ಬಾಂಬಿಟ್ಟ ಆರೋಪಿ

Update: 2018-03-15 04:00 GMT

ವಾಷಿಂಗ್ಟನ್, ಮಾ.15: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆವರಣ ಗೋಡೆ ನಿರ್ಮಾಣ ಯೋಜನೆಗೆ ಬಿಡ್ ಸಲ್ಲಿಸಿದ್ದ ಕಂಪೆನಿಯ ಮಾಲಕ ಸೇರಿದಂತೆ ಮೂವರು ಮಿನ್ನೆಸೊಟಾ ಮಸೀದಿಗೆ ಬಾಂಬ್ ಇಟ್ಟಿದ್ದರು ಎಂದು ಫೆಡರಲ್ ಕಂಪ್ಲೇಟ್ಸ್ ವಿಭಾಗ ಬಹಿರಂಗಪಡಿಸಿದೆ.

ಅಮೆರಿಕದಿಂದ ಮುಸ್ಲಿಮರನ್ನು ಹೊರಗಟ್ಟುವ ಸಲುವಾಗಿ ಈ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿದ್ದರು ಎನ್ನಲಾಗಿದೆ. ಗ್ರಾಮೀಣ ಇಲಿನೊಯಿಸ್‌ನ ಮೂವರನ್ನು ಈ ಸಂಬಂಧ ಬಂಧಿಸಲಾಗಿದ್ದು, ಕಳೆದ ಬೇಸಿಗೆಯಲ್ಲಿ ಮಿನ್ನೆ ಪೊಲೀಸ್‌ನಲ್ಲಿರುವ ದರ್ ಅಲ್ ಫಾರೂಕ್ ಇಸ್ಲಾಮಿಕ್ ಸೆಂಟರ್ ಮೇಲೆ ಬಾಂಬ್ ದಾಳಿ ಮಾಡಿದ್ದಾಗಿ ಈ ಪೈಕಿ ಒಬ್ಬ ತಪ್ಪೊಪ್ಪಿಕೊಂಡಿದ್ದಾನೆ.

"ಯಾರನ್ನೂ ಕೊಲ್ಲುವ ಉದ್ದೇಶ ನಮಗೆ ಇರಲಿಲ್ಲ. ಆದರೆ ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿ, ದೇಶದಿಂದ ಹೊರಗೋಡಿಸುವುದು ನಮ್ಮ ಉದ್ದೇಶವಾಗಿತ್ತು. ನಿಮಗೆ ಇಲ್ಲಿ ಸ್ವಾಗತ ಇಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಬೇಕಿತ್ತು" ಎಂದು ಮೈಕೆಲ್ ಮೆಕ್‌ವ್ಹೋರ್ಟರ್ ಹೇಳಿದ್ದಾನೆ.

2017ರ ಆಗಸ್ಟ್ 5ರಂದು ನಡೆದ ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಅಥವಾ ಸತ್ತಿಲ್ಲ. ಆದರೆ ಮಿನ್ನೆಸೋಟಾ ಮುಸ್ಲಿಂ ಸಮುದಾಯದಲ್ಲಿ ಇದು ಭೀತಿ ಹುಟ್ಟಿಸಿತ್ತು. ಈ ಪ್ರದೇಶದಲ್ಲಿ ಹಲವು ಮಂದಿ ಸೋಮಾಲಿಯಾ ವಲಸಿಗರು ನೆಲೆಸಿದ್ದರು. ಈ ಘಟನೆಯನ್ನು ಖಂಡಿಸದ ಬಗ್ಗೆ ಟ್ರಂಪ್ ಕ್ರಮವನ್ನು ಬಹಳಷ್ಟು ಮುಖಂಡರು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News