ಮೇವು ಹಗರಣ: ನಾಲ್ಕನೇ ಪ್ರಕರಣದ ತೀರ್ಪು ಮುಂದೂಡಿಕೆ

Update: 2018-03-15 14:27 GMT

ರಾಂಚಿ, ಮಾ.15: ಬಿಹಾರದ ಮಾಜಿಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗು ಜಗನ್ನಾಥ್ ಮಿಶ್ರಾ ಪ್ರಮುಖ ಆರೋಪಿಗಳಾಗಿರುವ ಮೇವು ಹಗರಣದ ನಾಲ್ಕನೇ ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯವು ಗುರುವಾರದಂದು ಮುಂದೂಡಿದೆ. ಲಾಲೂ ಪ್ರಸಾದ್ ಅವರ ವಕೀಲರು ಈ ಪ್ರಕರಣದಲ್ಲಿ ಮೇಲ್ಮನವಿಯನ್ನು ಸಲ್ಲಿಸಿರುವ ಕಾರಣ ವಿಶೇಷ ನ್ಯಾಯಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದುಮ್ಕ ಖಜಾನೆಯಿಂದ 3.13 ಕೋಟಿ ರೂ. ಮೋಸದಿಂದ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪಿನ ಮುಂದಿನ ದಿನಾಂಕವನ್ನು ನ್ಯಾಯಾಲಯವು ನಿಗದಿಪಡಿಸಿಲ್ಲ. ಲಾಲೂ ಪ್ರಸಾದ್ ಅವರ ವಕೀಲ, 1990ರಲ್ಲಿ ಅಕೌಂಟೆಂಟ್ ಜನರಲ್ ಆಫ್ ಆಫೀಸ್‌ನ ಅಧಿಕಾರಿಗಳಾಗಿದ್ದ ಮೂವರನ್ನು ಈ ಪ್ರಕರಣದಲ್ಲಿ ಭಾರತೀಯ ದಂಡಸಂಹಿತೆ 319ರಡಿಯಲ್ಲಿ ಕಕ್ಷೀದಾರರನ್ನಾಗಿ ಮಾಡಬೇಕು ಎಂದು ಮನವಿ ಮಾಡಿ ಅರ್ಜಿ ಸಲ್ಲಿಸಿದ ಕಾರಣ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಪ್ರಕರಣದ ತೀರ್ಪನ್ನು ಮುಂದೂಡಿದರು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News