ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಎಂದ ಯಡಿಯೂರಪ್ಪನವರನ್ನು ಟ್ವಿಟರಿಗರು ಗೋಳು ಹೊಯ್ದುಕೊಂಡಿದ್ದು ಹೇಗೆ ?

Update: 2018-03-16 04:46 GMT

ಬೆಂಗಳೂರು, ಮಾ. 15 : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಗುರುವಾರ ಸಂಜೆ ಮಾಡಿರುವ ಟ್ವೀಟ್ ಒಂದು ಚರ್ಚೆಗೆ ಗ್ರಾಸವಾಗಿದೆ. Breaking News Tomorrow @ 5pm ( ನಾಳೆ ಸಂಜೆ ಐದು ಗಂಟೆಗೆ ಬ್ರೇಕಿಂಗ್ ನ್ಯೂಸ್ ) ಎಂದು ಯಡಿಯೂರಪ್ಪ ಗುರುವಾರ ಸಂಜೆ 7 ಗಂಟೆಗೆ ಟ್ವೀಟ್ ಮಾಡಿದ್ದಾರೆ. 

ರಾಜ್ಯದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಸರಕಾರವನ್ನು ಕಮಿಷನ್ ಸರಕಾರ ಎಂದು ಟೀಕಾ ಪ್ರಹಾರ ನಡೆಸಿದ್ದರು. ಆದರೆ ಪ್ರಧಾನಿಯ ಈ ಆರೋಪಕ್ಕೆ ಸೂಕ್ತ ದಾಖಲೆಯನ್ನು ಬಿಜೆಪಿ ತೋರಿಸಿರಲಿಲ್ಲ. ಅದನ್ನು ಕೇಳಿದ ಸಿದ್ದರಾಮಯ್ಯ ನಮ್ಮದು 10% ಕಮಿಷನ್ ಸರಕಾರ ಎನ್ನುವ ನಿಮ್ಮದು 90% ಕಮಿಷನ್ ಸರಕಾರ ಎಂದು ತಿರುಗೇಟು ನೀಡಿದ್ದರು. 

ಯಡಿಯೂರಪ್ಪ ಸಹಿತ ಬಿಜೆಪಿ ನಾಯಕರು ಸಿದ್ದರಾಮಯ್ಯ ಸರಕಾರದ ವಿರುದ್ಧ ಭ್ರಷ್ಟ ಸರಕಾರ ಎಂದು ಆಗಾಗ ಹರಿಹಾಯುತ್ತಲೇ ಇದ್ದಾರೆ . ಆದರೆ ಈವರೆಗೆ ರಾಜ್ಯ ಸರಕಾರ ಶಾಮೀಲಾಗಿದೆ ಎಂದು ತೋರಿಸುವ ಯಾವುದೇ ದೊಡ್ಡ ಹಗರಣದ ದಾಖಲೆ ಮುಂದಿಡುವಲ್ಲಿ ಬಿಜೆಪಿ ಯಶಸ್ವಿಯಾಗಿಲ್ಲ. ಹಾಗಾಗಿ ಅದು ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಭ್ರಷ್ಟತೆಯ ಆರೋಪ ಕೂಡ ಹೆಚ್ಚು ಬಿಸಿ ತಾಗಿಸದೆ ಅಲ್ಲಿಂದ ಅಲ್ಲಿಗೆ ಮುಗಿಯುತ್ತಿದೆ.

ಈಗ ಯಡಿಯೂರಪ್ಪ ಮಾಡಿರುವ ಟ್ವೀಟ್ ನೋಡಿದರೆ ನಾಳೆ ರಾಜ್ಯ ಸರಕಾರದ ವಿರುದ್ಧ ಯಾವುದಾದರೂ ಗಂಭೀರ ಆರೋಪ ಮಾಡುವ ಅಥವಾ ದಾಖಲೆ ಮುಂದಿಡುವ ಸಾಧ್ಯತೆ ಇರಬಹುದು. ಈವರೆಗೆ ಇಂತಹ ಹಲವು ಆರೋಪಗಳನ್ನು ಮಾಡಿ ಅದಕ್ಕೆ ಸೂಕ್ತ ದಾಖಲೆ ನೀಡುವಲ್ಲಿ ವಿಫಲವಾಗಿರುವ ಬಿಜೆಪಿ ಈ ಬಾರಿಯೂ ಹಿಟ್ ಅಂಡ್ ರನ್ ಮಾಡುತ್ತದೆಯೇ ಅಥವಾ ನಿಜವಾಗಿಯೂ ಏನಾದರೂ ಮಹತ್ವದ ಆರೋಪವನ್ನು ಪುರಾವೆ ಸಮೇತ ಮುಂದಿಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ. 

ಈ ನಡುವೆ ಯಡಿಯೂರಪ್ಪ ಗುರುವಾರ ಬ್ರೇಕಿಂಗ್ ನ್ಯೂಸ್ ಬಗ್ಗೆ ಮಾಡಿರುವ ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆಗಳು ಬಹಳ ಸೊಗಸಾಗಿವೆ. ಕೆಲವು ಬಿಜೆಪಿ ಬೆಂಬಲಿಗರು ಸಹಜವಾಗಿ ಯಡಿಯೂರಪ್ಪನವರನ್ನು ಬೆಂಬಲಿಸಿ ಬೇಗ ವಿಷಯ ಮುಂದಿಟ್ಟು ಈ ಸರಕಾರವನ್ನು ತೊಲಗಿಸಿ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಹೆಚ್ಚಿನವರು ಮಾಡಿರುವ ಟ್ವೀಟ್ ಬಹಳ ತಮಾಷೆಯಾಗಿವೆ. 

ಶ್ರೀವತ್ಸ ಎಂಬವರು ಬಿ ಎಸ್ ವೈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು ಹೀಗೆ : 


ಕೆಲವರು ಕೆಜೆಪಿ ಸ್ಥಾಪಕ ಪ್ರಸನ್ನ ಕುಮಾರ್ ಅವರನ್ನು ನೆನಪಿಸಿದರೆ, ಇನ್ನು ಕೆಲವರು 'ನೀವು ಹೀಗೆ ಹೇಳುತ್ತೀರಿ, ಏನೂ ಮಾಡುವುದಿಲ್ಲ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು 'ಸಿದ್ದರಾಮಯ್ಯ ಅಭಿವೃದ್ಧಿಯ ಮಾತಾಡಿದರೆ, ನೀವು ಕೇವಲ ಕೋಮು ಧ್ರುವೀಕರಣ ಮಾಡುತ್ತೀರಿ' ಎಂದು ಟೀಕಿಸಿದ್ದಾರೆ. 'ಮೊದಲು ನಿಮ್ಮ ಬಾಕಿ ಇರುವ ಕೇಸುಗಳನ್ನು ಕ್ಲಿಯರ್ ಮಾಡಿಕೊಳ್ಳಿ' ಎಂದು ಒಬ್ಬರು ಸಲಹೆ ಕೊಟ್ಟರೆ ಇನ್ನೊಬ್ಬರು 'ಮುಖ್ಯಮಂತ್ರಿ ಅಭ್ಯರ್ಥಿ ನೀವಾಗದೆ ಹೆಗಡೆ ಆಗುತ್ತಿದ್ದಾರಾ' ಎಂದು ಕಾಲೆಳೆದಿದ್ದಾರೆ. 

ಟ್ವೀಟರಿಗರು ಮಾಡಿದ ಪ್ರತಿಕ್ರಿಯೆಗಳ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News