ಶೀಘ್ರವೇ ಐದು ಪೈಸೆಗೆ ಲೀಟರ್‌ ನೀರು ಪೂರೈಕೆ: ನಿತಿನ್ ಗಡ್ಕರಿ

Update: 2018-03-17 04:06 GMT

ಭೋಪಾಲ್, ಮಾ.17: ಸಮುದ್ರದ ಮೂಲದ ನೀರನ್ನು ಶುದ್ಧೀಕರಿಸಿ, ಜನರಿಗೆ ಲೀಟರ್‌ಗೆ ಐದು ಪೈಸೆ ವೆಚ್ಚದಲ್ಲಿ ಪೂರೈಸಲು ಸರ್ಕಾರ ಮುಂದಾಗಿದೆ ಎಂದು ಜಲ ಸಂಪನ್ಮೂಲ ಖಾತೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ತಮಿಳುನಾಡಿನ ತೂತುಕುಡಿಯಲ್ಲಿ ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಪ್ರಯೋಗ ನಡೆದಿದೆ ಎಂದು ಅವರು ಶುಕ್ರವಾರ ತಿಳಿಸಿದ್ದಾರೆ.

ಬಂದ್ರಾಭನ್‌ನಲ್ಲಿ ಎರಡು ದಿನಗಳ ನದಿ ಮಹೋತ್ಸವ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕೆಲ ರಾಜ್ಯಗಳು ನೀರಿಗಾಗಿ ಹೊಡೆದಾಡಿಕೊಳ್ಳುತ್ತಿವೆ. ಆದರೆ ಪಾಕಿಸ್ತಾನಕ್ಕೆ ಹರಿದು ಹೋಗುವ ನೀರಿನ ಬಗ್ಗೆ ಚಕಾರ ಎತ್ತದಿರುವುದು ದುರದೃಷ್ಟಕರ ಎಂದು ಹೇಳಿದರು. ಭಾರತ ಹಾಗೂ ಪಾಕಿಸ್ತಾನ ಆರು ನದಿಗಳನ್ನು ಹಂಚಿಕೊಂಡಿವೆ.

"ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯುತ್ತಿವೆ. ಆದರೆ ಯಾವ ಪತ್ರಿಕೆಯೂ ಈ ಬಗ್ಗೆ ಬರೆಯುವುದಿಲ್ಲ ಅಥವಾ ಇದನ್ನು ತಡೆಯುವಂತೆ ಶಾಸಕರೂ ಆಗ್ರಹಿಸುವುದಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News