ಕಾನೂನು ಬಾಹಿರವಾಗಿ ನಾಲ್ಕು ಮಂದಿ ಕಾರ್ಮಿಕರ ಅಮಾನತು: ಹರಿಗೋವಿಂದ

Update: 2018-03-17 13:39 GMT

ಬೆಂಗಳೂರು, ಮಾ.17: ಕಾರ್ಮಿಕ ಸಂಘಟನೆಯ ಜೊತೆ ಸಕ್ರಿಯವಾಗಿದ್ದು ಕಾರಣಕ್ಕೆ ಜಾಕಿ ಗಾರ್ಮೆಂಟ್ಸ್‌ನ ಆಡಳಿತ ಮಂಡಳಿ ತನ್ನ ನಾಲ್ಕು ಮಂದಿ ಕಾರ್ಮಿಕರನ್ನು ಅಮಾನತು ಮಾಡಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಆರೋಪಿಸಿದ್ದಾರೆ.

ನಗರದ ಮೊಬ್ಬಸಂದ್ರದಲ್ಲಿರುವ ಜಾಕಿ ಗಾರ್ಮೆಂಟ್ಸ್‌ನಲ್ಲಿ ಕಾನೂನಾತ್ಮಕವಾಗಿಯೆ ಎಐಟಿಯುಸಿ ಸಂಘಟನೆ ಕಟ್ಟಿದ ಕಾರಣಕ್ಕೆ ನಾಲ್ಕು ಮಂದಿ ಕಾರ್ಮಿಕರನ್ನು ಅಮಾನತು ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಾತ್ಮಕವಾಗಿ ಸಂಘಟನೆ ಕಟ್ಟುವುದು ಪ್ರತಿಯೊಬ್ಬರ ಹಕ್ಕು. ಅದಕ್ಕೆ ಅವಕಾಶ ಕೊಡದೆ ಜಾಕಿ ಗಾರ್ಮೆಂಟ್ಸ್ ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ತಿಳಿಸಿದರು.

ಜಾಕಿ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಕಾರ್ಮಿಕರು ಯಂತ್ರದಂತೆ ಕೆಲಸ ಮಾಡಬೇಕಾದ ವಾತಾವರಣ ನಿರ್ಮಿಸಲಾಗಿದೆ. ಇದರ ಜೊತೆಗೆ ಮಾನಸಿಕ ಕಿರುಕುಳ ಕೊಡಲಾಗುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ ಕೆಲಸದಿಂದ ಅಮಾನತು ಮಾಡುವ ಬೆದರಿಕೆ ಹಾಕಲಾಗುತ್ತಿದೆ. ಕಾರ್ಮಿಕರ ಇಂತಹ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಸಂಘಟನೆ ಕಟ್ಟಲಾಗಿತ್ತು. ಆದರೆ, ಇದನ್ನು ಸಹಿಸದ ಆಡಳಿತ ಮಂಡಳಿ ಸಂಘಟನೆಯ ಪ್ರಮುಖರನ್ನು ಅಮಾನತು ಮಾಡಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News