ಬ್ರೆಝಿಲ್: ಮಹಿಳಾ ರಾಜಕಾರಣಿಯ ಹತ್ಯೆ ಖಂಡಿಸಿ ಬೀದಿಗಿಳಿದ ಜನರು

Update: 2018-03-18 10:48 GMT

ರಿಯೋ, ಮಾ.18: ಪ್ರಸಿದ್ಧ ರಾಜಕಾರಣಿ ಹಾಗು ಹೋರಾಟಗಾರ್ತಿ ಮರೀಲೆ ಫ್ರಾಂಕೋರ ಹತ್ಯೆ ಖಂಡಿಸಿ ಬ್ರೆಝಿಲ್ ನಾದ್ಯಂತ ಸಾವಿರಾರು ಮಂದಿ ಭಾರೀ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ರಿಯೋ ಡಿ ಜನೆರೋದ ಕೌನ್ಸಿಲ್ ನ ಜನಪ್ರತಿನಿಧಿಯಾಗಿರುವ ಮರೀಲೆ ಹಾಗು ಅವರ ಕಾರು ಚಾಲಕನನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಹತ್ಯೆ ಮಾಡಿತ್ತು. ಸಲಿಂಗಿ ಹಾಗು ಕರಿಯರ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದ ಮರೀಲೆ ನಗರದಲ್ಲಿ ಮಿತಿಮೀರುತ್ತಿರುವ ಪೊಲೀಸ್ ದೌರ್ಜನ್ಯದ ವಿರುದ್ಧವೇ ಹೋರಾಟ ನಡೆಸುತ್ತಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ರೆಝಿಲ್ ಅಧ್ಯಕ್ಷ ಕೃತ್ಯವನ್ನು ಖಂಡಿಸಿದ್ದಾರೆ. ರಿಯೋ ಡಿ ಜನೆರೋ ಭದ್ರತೆಗಾಗಿ ಸೇನೆಯನ್ನು ನೇಮಿಸುವ ವಿಚಾರದಲ್ಲಿ ಮರೀಲೆ ಹಾಗು ಬ್ರೆಝಿಲ್ ಅಧ್ಯಕ್ಷರ ವಿರುದ್ಧ ಮನಸ್ತಾಪವಿತ್ತು. ಇದೊಂದು ರಾಜಕೀಯ ಹತ್ಯೆ ಎಂಬುದಾಗಿ ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News