ಇನ್ನೊಂದು ಬ್ಯಾಂಕ್ ಗೋಲ್‌ಮಾಲ್ : ಕನಿಷ್ಕ್ ಗೋಲ್ಡ್ ನಿಂದ 14 ಬ್ಯಾಂಕ್ ಗಳಿಗೆ 824 ಕೋ.ರೂ. ವಂಚನೆ

Update: 2018-03-21 18:48 GMT

ಹೊಸದಿಲ್ಲಿ, ಮಾ.21: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಬಳಿಕ ತಮಿಳುನಾಡಿನಲ್ಲಿ ಇನ್ನೊಂದು ಬ್ಯಾಂಕ್ ವಂಚನೆ ಬೆಳಕಿಗೆ ಬಂದಿದೆ. ಕನಿಷ್ಕ್ ಗೋಲ್ಡ್ ಜ್ಯುವೆಲ್ಲರಿ ಪಿಎನ್‌ಬಿ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ 14 ಬ್ಯಾಂಕ್‌ಗಳಿಗೆ 824 ಕೋ. ರೂ. ವಂಚನೆ ಎಸಗಿದೆ.

  842.15 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿ ಸರಣಿ ಜ್ಯುವೆಲ್ಲರಿಗಳನ್ನು ಹೊಂದಿರುವ ಕನಿಷ್ಕ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ತನಿಖೆಗೆ ನೆರವು ನೀಡುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಜನವರಿಯಲ್ಲಿ ಸಿಬಿಐಯನ್ನು ಕೋರಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

   ಚೆನ್ನೈಯ ಟಿ. ನಗರದಲ್ಲಿ ನೋಂದಾಯಿತ ಕಚೇರಿ ಹೊಂದಿರುವ ಕನಿಷ್ಕ್‌ನ ಪ್ರವರ್ತಕರು ಹಾಗೂ ನಿರ್ದೇಶಕರು ಭೂಪೇಶ್ ಕುಮಾರ್ ಜೈನ್ ಹಾಗೂ ಅವರ ಪತ್ನಿ ನೀತಾ ಜೈನ್. ಪ್ರಸ್ತುತ ಮಾರಿಷಸ್‌ನಲ್ಲಿದ್ದಾರೆ ಎಂದು ಹೇಳಲಾದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಬ್ಯಾಂಕ್‌ಗಳು ಹೇಳಿವೆ. ಕನಿಷ್ಕ್‌ಗೆ ಸಾಲ ನೀಡಿದ ಸರಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಸೇರಿದಂತೆ 14 ಬ್ಯಾಂಕ್‌ಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಮುಖವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News