ನಟಿಗೆ ಜಿಮ್‌ನಲ್ಲಿ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

Update: 2018-03-22 04:19 GMT

ಮುಂಬೈ, ಮಾ. 22: ಕಳೆದ ತಿಂಗಳು ಇಲ್ಲಿನ ಅಂಧೇರಿ ಜಿಮ್‌ನಲ್ಲಿ ಪಂಜಾಬಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

"ಆರೋಪಿ ಹಾಗೂ ನಟಿ ಒಂದೇ ಜಿಮ್‌ಗೆ ಹೋಗುತ್ತಿದ್ದರು. ಕಳೆದ ತಿಂಗಳು ಆರೋಪಿ, ನಟಿಯನ್ನು ಅಸಂಬದ್ಧವಾಗಿ ಸ್ಪರ್ಶಿಸಿದ್ದಲ್ಲದೇ, ಮಾನಹಾನಿಕರ ಭಾಷೆ ಬಳಸಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನಿಗೆ ಆತ ಅರ್ಜಿ ಸಲ್ಲಿಸಿದ್ದ. ಆತನ ವಿರುದ್ಧ ಒಶಿವರ ಠಾಣೆಯಲ್ಲಿ ಕೂಡಾ ಇಂಥದ್ದೇ ಪ್ರಕರಣ ದಾಖಲಾಗಿದೆ" ಎಂದು ಅಂಬೋಲಿ ಪೊಲೀಸ್ ಠಾಣೆಯ ಮೂಲಗಳು ಹೇಳಿವೆ.

ಕರ್ನಾಟಕದಲ್ಲಿ ಅಡಗಿದ್ದ ಆರೋಪಿಯನ್ನು ಆತ ಮುಂಬೈಗೆ ವಾಪಸ್ಸಾದ ತಕ್ಷಣ ಬಂಧಿಸಲಾಗಿದೆ. ಆತ ರಾಜಕೀಯ ಪಕ್ಷವೊಂದರ ಜತೆ ಸಂಪರ್ಕ ಹೊಂದಿ ದ್ದಾನೆ ಎನ್ನಲಾಗಿದೆ. "ಆರೋಪಿಯ ಜಾಮೀನು ಕೋರಿಕೆಯನ್ನು ನಾವು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದ್ದೆವು. ಅದು ತಿರಸ್ಕೃತವಾದ ತಕ್ಷಣ ಆತನನ್ನು ಬಂಧಿಸಲಾಗಿದೆ" ಎಂದು ತನಿಖಾಧಿಕಾರಿ ದಯಾ ನಾಯಕ್ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News