ಜೂನಿಯರ್ ಶೂಟಿಂಗ್ ವಿಶ್ವಕಪ್: ವಲೇರಿವನ್‌ಗೆ ಚಿನ್ನ

Update: 2018-03-22 08:04 GMT

ಸಿಡ್ನಿ, ಮಾ.22: ವರ್ಷದ ಮೊದಲ ಜೂನಿಯರ್ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ನ 10 ಮೀ. ಮಹಿಳೆಯರ ಏರ್ ರೈಫಲ್ ಇವೆಂಟ್‌ನಲ್ಲಿ ಭಾರತದ ಶೂಟರ್ ಎಲ್ವೆನಿಲ್ ವಲೇರಿವನ್ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.

 ವಲೇರಿವನ್ ವೈಯಕ್ತಿಕ ಚಿನ್ನದ ಪದಕದ ಜೊತೆಗೆ ಶ್ರೇಯಾ ಅಗರ್ವಾಲ್ ಹಾಗೂ ಝೀನಾ ಖಿಟ್ಟಾ ಜೊತೆಗೂಡಿ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅರ್ಜುನ್ ಬಾಬುಟಾ ಕಂಚು ಜಯಿಸುವುದರೊಂದಿಗೆ ಜೂನಿಯರ್ ವಿಶ್ವಕಪ್‌ನಲ್ಲಿ ಎರಡನೇ ಪದಕ ಜಯಿಸಿದ್ದಾರೆ.

18ರ ಹರೆಯದ ವಲೇರಿವನ್ ಎರಡನೇ ಬಾರಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ್ದು ಮೊದಲ ಬಾರಿ ಫೈನಲ್‌ಗೆ ತಲುಪಿದ್ದಾರೆ. ಫೈನಲ್‌ನಲ್ಲಿ 249.8 ಅಂಕ ಗಳಿಸಿರುವ ವಲೇರಿವನ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 631.4 ಅಂಕ ಗಳಿಸಿರುವ ವಲೇರಿವನ್ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ವಲೇರಿವನ್ ಕಳೆದ ವಾರ ನಡೆದ ವಿಶ್ವ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News