ಸ್ವಯಂಚಾಲಿತ ವಾಹನಕ್ಕೆ ಅಮೆರಿಕದಲ್ಲಿ ಮೊದಲ ಬಲಿ: ಘಟನೆ ಕ್ಯಾಮರಾದಲ್ಲಿ ಸೆರೆ

Update: 2018-03-22 11:31 GMT

ಸ್ಯಾನ್ ಫ್ರಾನ್ಸಿಸ್ಕೋ,ಮಾ.22 : ಉಬರ್ ಸ್ವಯಂಚಾಲಿತ ವಾಹನವೊಂದು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದ ವೀಡಿಯೋವೊಂದನ್ನು ಅರಿಝೋನಾ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಸ್ವಯಂಚಾಲಿತ ವಾಹನಗಳು ಎಷ್ಟು ಸುರಕ್ಷಿತ ಎಂಬ ವಿಚಾರವೂ ಈ ಅಪಘಾತದ ನಂತರ ಹೆಚ್ಚು ಚರ್ಚಿತವಾಗುತ್ತಿದೆ.

ಉಬರ್ ಪರೀಕ್ಷಾರ್ಥವಾಗಿ ಉಪಯೋಗಿಸಿದ ವೋಲ್ವೋ ಸ್ಪೋರ್ಟ್ಸ್ ಯುಟಿಲಿಟಿ ವಾಹನದ ಒಳಗಿನಿಂದ ಈ ವೀಡಿಯೋ ತೆಗೆಯಲಾಗಿದ್ದು  ವಾಹನವು ಕತ್ತಲು ಆವರಿಸಿದ್ದ ರಸ್ತೆಯಲ್ಲಿ ಸಂಚರಿಸುತ್ತಿದ್ದಂತೆಯೇ  ಬೈಸಿಕಲ್  ಅನ್ನು ನೂಕುತ್ತಾ ಸಾಗುತ್ತಿದ್ದ ಮಹಿಳೆಯೊಬ್ಬಳು ಕಾಣಿಸುತ್ತಾಳೆ. ಆ ಮಹಿಳೆ, 49 ವರ್ಷದ ಎಲೈನ್ ಹರ್ಝ್‍ಬರ್ಗ್ ನಂತರ ತನಗಾದ ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದರು.

ಫೀನಿಕ್ಸ್ ಉಪನಗರಿಯಾದ ಟೆಂಪೆ ಎಂಬಲ್ಲಿ ರವಿವಾರ ರಾತ್ರಿ ಈ ಘಟನೆ ನಡೆದಿತ್ತು. ಈ ಘಟನೆಯ ನಂತರ ಉಬರ್ ತನ್ನ ಸ್ವಯಂಚಾಲಿತ ವಾಹನದ ಪ್ರಯೋಗವನ್ನು ಉತ್ತರ ಅಮೆರಿಕಾದಲ್ಲಿ ನಿಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News