ಸಿಡಿಆರ್ ಪ್ರಕರಣ: ಬಾಲಿವುಡ್ ನ ಇಬ್ಬರು ನಟಿಯರಿಗೆ ನೋಟಿಸ್

Update: 2018-03-22 15:08 GMT

ಮುಂಬೈ, ಮಾ. 22: ಸಿಡಿಆರ್ ಹಗರಣಕ್ಕೆ ಸಂಬಂಧಿಸಿ ಥಾಣೆ ಪೊಲೀಸರಿಂದ ಬಂಧನಕ್ಕೊಳಗಾದ ವಕೀಲ ರಿಝ್ವೊನ್ ಸಿದ್ದೀಕಿ ಅವರನ್ನು ಬಿಡುಗಡೆ ಮಾಡುವಂತೆ ಬಾಂಬೆ ಉಚ್ಚ ನ್ಯಾಯಾಲಯ ಬುಧವಾರ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಸಿಡಿಆರ್ ಪ್ರಕರಣದ ತನಿಖೆಯಲ್ಲಿ ಆಯೇಷಾ ಶ್ರಾಫ್, ಕಂಗನಾ ರಾಣವತ್, ನವಾಝುದ್ದೀನ್ ಸಿದ್ದೀಕಿ ಅವರ ಹೆಸರು ಕೇಳಿ ಬಂದಿದೆ. ವಕೀಲ ಸಿದ್ದೀಕಿ ಅವರ ಪತ್ನಿ ತಸ್ನೀಮಾ ಅವರ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸಿ. ಧರ್ಮಾದಿಕಾರಿ ಹಾಗೂ ನ್ಯಾಯಮೂರ್ತಿ ಪಿ.ಡಿ. ನಾಯ್ಕಾ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿದೆ. ತನ್ನ ಪತಿಯ ಬಂಧನ ಅಕ್ರಮ ಹಾಗೂ ಕಾನೂನು ಬಾಹಿರ. ಆದುದರಿಂದ ಅವರನ್ನು ಬಿಡುಗಡೆಗೊಳಿಸಿ ಎಂದು ತಸ್ನೀಮ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿ ಅವರ ಪತ್ನಿ ಆಲಿಯಾ ಅವರ ಕಾಲ್ ಡಾಟಾ ರೆಕಾರ್ಡ್ ಪಡೆದಿರುವ ಆರೋಪಕ್ಕೆ ಸಂಬಂಧಿಸಿ ಥಾಣೆ ಪೊಲೀಸರು ಸಿದ್ದೀಖಿ ಅವರನ್ನು ಬಂಧಿಸಿದ್ದರು. ಇದರ ಒಂದು ಭಾಗವಾಗಿ ಹೇಳಿಕೆ ನೀಡಲು ಥಾಣೆ ಪೊಲೀಸರು ಬುಧವಾರ ರಾಣವತ್ ಹಾಗೂ ಶ್ರಾಫ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News