ಗಡಿ ಸೈನಿಕರನ್ನು ಸೇನಾ ಕಮಾಂಡ್ ವ್ಯಾಪ್ತಿಗೆ ಸೇರಿಸಿದ ಚೀನಾ

Update: 2018-03-22 17:17 GMT

 ಬೀಜಿಂಗ್, ಮಾ. 22: ಭಾರತದೊಂದಿಗಿನ ಗಡಿ ಕಾಯುವ ಸೈನಿಕರು ಸೇರಿದಂತೆ ತನ್ನ ಗಡಿ ಸೈನಿಕರನ್ನು ಚೀನಾ ನೇರವಾಗಿ ಸೇನಾ ಕಮಾಂಡ್‌ನ ವ್ಯಾಪ್ತಿಗೆ ತಂದಿದೆ ಹಾಗೂ ಈ ಸೈನಿಕರ ಮೇಲಿನ ನಾಗರಿಕ ಅಧಿಕಾರಿಗಳ ನಿಯಂತ್ರಣವನ್ನು ತೆಗೆದುಹಾಕಿದೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಗಡಿ ರಕ್ಷಣಾ ಸೈನಿಕರನ್ನು ಪೀಪಲ್ಸ್ ಆರ್ಮ್‌ಡ್ ಪೊಲೀಸ್ (ಪಿಎಪಿ)ನ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಘೋಷಿಸಿದೆ ಎಂದು ಪತ್ರಿಕೆ ಹೇಳಿದೆ.

ದೇಶದ ಸಶಸ್ತ್ರ ಪಡೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News