ಬೆಂಗಳೂರು : ಬಿಜೆಪಿ ಮುಖಂಡನಿಂದ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ

Update: 2018-03-24 06:59 GMT

ಬೆಂಗಳೂರು, ಮಾ.24: ಪೆಟ್ರೋಲ್ ಬಂಕ್ ಬಳಿ ತನ್ನ ಅನುಮತಿ ಯಿಲ್ಲದೆ ಸಚಿವ ರೋಶನ್ ಬೇಗ್ ಕಟೌಟ್ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿ ಬಿಜೆಪಿ ಮುಖಂಡ ಬಾಲಕೃಷ್ಣ ಎಂಬಾತ ಬಂಕ್ ಕ್ಯಾಶಿಯರ್‌ಗೆ ಥಳಿಸಿರುವ ಘಟನೆ ವರದಿಯಾಗಿದೆ.

ಶಿವಾಜಿನಗರದ ಯುನಿವರ್ಸಲ್ ಪೆಟ್ರೋಲ್ ಬಂಕ್‌ನಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಿಜೆಪಿಯ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಾ ಬೆಂಬಲಿಗ, ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಸ್ಪರ್ಧಿಸಿ ಸೋತಿರುವ ಬಾಲಕೃಷ್ಣ ಪೆಟ್ರೋಲ್ ಬಂಕ್ ಸಿಬ್ಬಂದಿ ಬಳಿ ಕಟೌಟ್‌ಗೆ ಸಂಬಂಧಿಸಿ ಪ್ರಶ್ನಿಸಿದ್ದಲ್ಲದೆ ರಾಡ್‌ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ದೃಶ್ಯ ಬಂಕ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ರೋಶನ್ ಬೇಗ್ ಫೋಟೊವಿರುವ ಕಟೌಟ್‌ನ್ನು ತನ್ನ ಏರಿಯಾದಲ್ಲಿ ತನ್ನ ಅನುಮತಿಯಿಲ್ಲದೆ ಹಾಕಬಾರದು ಎಂದು ಬಾಲಕೃಷ್ಣ ವಾದವಾಗಿದೆ. ಕಟೌಟ್‌ಗೂ, ತನಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬ್ಬಂದಿ ಹೇಳಿದ್ದು, ಕಟೌಟ್ ಬಂಕ್‌ನ ಹೊರಭಾಗದಲ್ಲಿ ಕಾಂಗ್ರೆಸ್ ಬೆಂಬಲಿಗರು ಕಟ್ಟಿದ್ದಾರೆ ಎಂದು ಹೇಳಿದ್ದಾನೆ.

ಈ ಮೊದಲು ಕೂಡ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಕೃಷ್ಣ ವಿರುದ್ಧ ಶಿವಾಜಿ ನಗರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಬಾಲಕೃಷ್ಣ ವಿರುದ್ಧ ರೌಡಿ ಶೀಟ್ ಓಪನ್ ಮಾಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News